Phone icon  CALL US NOW
080 - 22161900

  • ಆವಾಹನೆ | Aavahane
ಆವಾಹನೆ | Aavahane
10%

ಆವಾಹನೆ | Aavahane

ಆವಾಹನೆ | Aavahane

MRP - ₹450.00 ₹405.00

ಫ್ಯೋದರ್ ದೊಸ್ತೋಯೆಸ್ಕಿ ಅವರ ʼದಿ ಪೊಸೆಸ್ಡ್‌ʼ ಕಾದಂಬರಿ ಕನ್ನಡಕ್ಕೆ : ಕೇಶವ ಮಳಗಿ ದೊಸ್ತೋಯೆಸ್ಕಿ ಕಾದಂಬರಿಗಳ ಬಹುಮುಖ್ಯ ಲಕ್ಷಣವೆಂದರೆ ಸ್ವಾತಂತ್ರ್ಯವನ್ನು ಸದಾ ಕಾಪಿಟ್ಟುಕೊಳ್ಳುವ, ಉಳಿದ ಪಾತ್ರಗಳ ಧ್ವನಿಯೊಂದಿಗೆ ಬೆರೆತುಹೋಗದ ಧ್ವನಿ ಮತ್ತು ಪ್ರಜ್ಞೆ ಇಲ್ಲಿನ ಪ್ರತಿ ಧ್ವನಿಗೂ ತನ್ನದೇ ಮಾನ್ಯತೆಯುಂಟು, ಜತೆಗೆ, ಅವು ಬಹುನೆಲೆಗಳನ್ನು ಪ್ರತಿನಿಧಿಸುತ್ತವೆ. ಆ ಅರ್ಥದಲ್ಲಿ ದೊಸ್ತ್ಯೆ ಬಹುಸ್ವರಗಳು ಮೇಳವಿಸಿದ ಕಾದಂಬರಿಗಳ ಸೃಷ್ಟಿಕರ್ತ. ಆತ ಸಂಪೂರ್ಣವಾಗಿ ಹೊಸತಾದ ಕಾದಂಬರಿ ಪ್ರಕಾರವನ್ನು ಆವಿಷ್ಕರಿಸಿದರು. ಹೀಗಾಗಿ, ಯುರೋಪಿನಲ್ಲಿ ಪ್ರಚಲಿತವಿರುವ ಅನೇಕ ಕಾದಂಬರಿಗಳಿಗೆ ಬಳಸುವ ಪೂರ್ವನಿಶ್ಚಿತ ಮಾನದಂಡಗಳನ್ನು ದೊಸೊಯೆ~ ಕಾದಂಬರಿಗಳಿಗೆ ಅನ್ವಯಿಸಲಾಗದು. ಅವರ ಕಾದಂಬರಿಯಲ್ಲಿನ ಪಾತ್ರಗಳು ಲೇಖಕನ ನಿಯಂತ್ರಿತ ಧ್ವನಿಯಾಗಿಯೋ, ಇಲ್ಲವೆ ಅದೊಂದು ಕೇವಲ ಪಾತ್ರವೆಂಬಂತೆಯೋ ಇರದು. ಕೃತಿಯಲ್ಲಿ ಪ್ರತಿ ಪಾತ್ರವು ಒಂದು ಅಸಾಧಾರಣವಾದ ಸ್ವಾತಂತ್ರ್ಯವನ್ನು ಪಡೆದು ಉಳಿದ ಪಾತ್ರಗಳೊಂದಿಗೆ ತನ್ನ ಧ್ವನಿಯನ್ನೂ ಪ್ರತ್ಯೇಕವಾಗಿ ಎದ್ದು ಕಾಣುವಂತೆ ಮಾಡುತ್ತದೆ. ಈ ಕಾರಣವಾಗಿಯೇ ಕಥಾವಸ್ತುವಿನ ನೆಲೆಯಲ್ಲಿ ಸಾಮಾನ್ಯವಾಗಿ ಬಳಸುವ ತಂತ್ರಗಳು ದೊಸ್ಕೊಯೆನ್ಶಿಯ ಕಥಾಲೋಕದಲ್ಲಿ ಸಾಕಾಗುವುದಿಲ್ಲ. ಇಂಥ ವಿಧಾನಗಳು ಲೇಖಕ ಹೇಳಿದಂತೆ ಕೇಳುವ ಅಡಿಯಾಳಾಗಿರುತ್ತವೆ. ದೊಸ್ತೋಯೆಸ್ಕಿ ಇಂಥ ಸ್ಥಿತ್ಯಂತರಗಳಲ್ಲಿ ಭಾಗಿಯಾಗುತ್ತ, ಕ್ಷಿಪ್ರವಾಗಿ ಪರಿವರ್ತನೆಗೊಳ್ಳುವ ಸಾಮಾಜಿಕ ಸನ್ನಿವೇಶವನ್ನು ಅರಿತುಕೊಳ್ಳಲು, ತನ್ನ ಅಂತರಂಗದ ಆಧ್ಯಾತ್ಮಿಕ ತುಡಿತದ ಪರಿ ಯಾವುದು ಎಂಬುದರ ಹುಡುಕಾಟದಲ್ಲಿದ್ದರು. ಸಮಾಜದ ಬಹುಸ್ತರಗಳೊಂದಿಗೆ ಆತನ ಒಡನಾಟ ಸಹಜವಾಗಿಯೇ ಮಹಾ ಕಾದಂಬರಿಯ ಹೊಸ ಪ್ರಕಾರವನ್ನು ಹುಟ್ಟಿಸಿತು. ಆದರೆ, ಆತ ಖಾಸಗಿ ಅನುಭವಗಳನ್ನು ಲೇಖಕನ ಒಂದೇ ಧ್ವನಿ, ಒಂದೇ ವಿಚಾರ, ಒಂದೇ ಪ್ರಜ್ಞೆಯ ಮೂಲಕ ಬರೆಯದೆ ಬಹುನೆಲೆಯ ಅಭಿವ್ಯಕ್ತಿ ಮಾಧ್ಯಮವನ್ನು ಕೈಗೆತ್ತಿಕೊಂಡಿದ್ದರಿಂದ ಜನಸಮುದಾಯದಲ್ಲಿ ಅಡಗಿದ್ದ ವೈರುಧ್ಯಗಳನ್ನು ಇನ್ನಷ್ಟು ಗಹನವಾಗಿ ಅರಿಯಲು ಸಾಧ್ಯವಾಯಿತು.

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2025
: Paperback
: 1/8 Demy Size
: 402
: .250

ಫ್ಯೋದರ್ ದೊಸ್ತೋಯೆಸ್ಕಿ ಅವರ ʼದಿ ಪೊಸೆಸ್ಡ್‌ʼ ಕಾದಂಬರಿ ಕನ್ನಡಕ್ಕೆ : ಕೇಶವ ಮಳಗಿ ದೊಸ್ತೋಯೆಸ್ಕಿ ಕಾದಂಬರಿಗಳ ಬಹುಮುಖ್ಯ ಲಕ್ಷಣವೆಂದರೆ ಸ್ವಾತಂತ್ರ್ಯವನ್ನು ಸದಾ ಕಾಪಿಟ್ಟುಕೊಳ್ಳುವ, ಉಳಿದ ಪಾತ್ರಗಳ ಧ್ವನಿಯೊಂದಿಗೆ ಬೆರೆತುಹೋಗದ ಧ್ವನಿ ಮತ್ತು ಪ್ರಜ್ಞೆ ಇಲ್ಲಿನ ಪ್ರತಿ ಧ್ವನಿಗೂ ತನ್ನದೇ ಮಾನ್ಯತೆಯುಂಟು, ಜತೆಗೆ, ಅವು ಬಹುನೆಲೆಗಳನ್ನು ಪ್ರತಿನಿಧಿಸುತ್ತವೆ. ಆ ಅರ್ಥದಲ್ಲಿ ದೊಸ್ತ್ಯೆ ಬಹುಸ್ವರಗಳು ಮೇಳವಿಸಿದ ಕಾದಂಬರಿಗಳ ಸೃಷ್ಟಿಕರ್ತ. ಆತ ಸಂಪೂರ್ಣವಾಗಿ ಹೊಸತಾದ ಕಾದಂಬರಿ ಪ್ರಕಾರವನ್ನು ಆವಿಷ್ಕರಿಸಿದರು. ಹೀಗಾಗಿ, ಯುರೋಪಿನಲ್ಲಿ ಪ್ರಚಲಿತವಿರುವ ಅನೇಕ ಕಾದಂಬರಿಗಳಿಗೆ ಬಳಸುವ ಪೂರ್ವನಿಶ್ಚಿತ ಮಾನದಂಡಗಳನ್ನು ದೊಸೊಯೆ~ ಕಾದಂಬರಿಗಳಿಗೆ ಅನ್ವಯಿಸಲಾಗದು. ಅವರ ಕಾದಂಬರಿಯಲ್ಲಿನ ಪಾತ್ರಗಳು ಲೇಖಕನ ನಿಯಂತ್ರಿತ ಧ್ವನಿಯಾಗಿಯೋ, ಇಲ್ಲವೆ ಅದೊಂದು ಕೇವಲ ಪಾತ್ರವೆಂಬಂತೆಯೋ ಇರದು. ಕೃತಿಯಲ್ಲಿ ಪ್ರತಿ ಪಾತ್ರವು ಒಂದು ಅಸಾಧಾರಣವಾದ ಸ್ವಾತಂತ್ರ್ಯವನ್ನು ಪಡೆದು ಉಳಿದ ಪಾತ್ರಗಳೊಂದಿಗೆ ತನ್ನ ಧ್ವನಿಯನ್ನೂ ಪ್ರತ್ಯೇಕವಾಗಿ ಎದ್ದು ಕಾಣುವಂತೆ ಮಾಡುತ್ತದೆ. ಈ ಕಾರಣವಾಗಿಯೇ ಕಥಾವಸ್ತುವಿನ ನೆಲೆಯಲ್ಲಿ ಸಾಮಾನ್ಯವಾಗಿ ಬಳಸುವ ತಂತ್ರಗಳು ದೊಸ್ಕೊಯೆನ್ಶಿಯ ಕಥಾಲೋಕದಲ್ಲಿ ಸಾಕಾಗುವುದಿಲ್ಲ. ಇಂಥ ವಿಧಾನಗಳು ಲೇಖಕ ಹೇಳಿದಂತೆ ಕೇಳುವ ಅಡಿಯಾಳಾಗಿರುತ್ತವೆ. ದೊಸ್ತೋಯೆಸ್ಕಿ ಇಂಥ ಸ್ಥಿತ್ಯಂತರಗಳಲ್ಲಿ ಭಾಗಿಯಾಗುತ್ತ, ಕ್ಷಿಪ್ರವಾಗಿ ಪರಿವರ್ತನೆಗೊಳ್ಳುವ ಸಾಮಾಜಿಕ ಸನ್ನಿವೇಶವನ್ನು ಅರಿತುಕೊಳ್ಳಲು, ತನ್ನ ಅಂತರಂಗದ ಆಧ್ಯಾತ್ಮಿಕ ತುಡಿತದ ಪರಿ ಯಾವುದು ಎಂಬುದರ ಹುಡುಕಾಟದಲ್ಲಿದ್ದರು. ಸಮಾಜದ ಬಹುಸ್ತರಗಳೊಂದಿಗೆ ಆತನ ಒಡನಾಟ ಸಹಜವಾಗಿಯೇ ಮಹಾ ಕಾದಂಬರಿಯ ಹೊಸ ಪ್ರಕಾರವನ್ನು ಹುಟ್ಟಿಸಿತು. ಆದರೆ, ಆತ ಖಾಸಗಿ ಅನುಭವಗಳನ್ನು ಲೇಖಕನ ಒಂದೇ ಧ್ವನಿ, ಒಂದೇ ವಿಚಾರ, ಒಂದೇ ಪ್ರಜ್ಞೆಯ ಮೂಲಕ ಬರೆಯದೆ ಬಹುನೆಲೆಯ ಅಭಿವ್ಯಕ್ತಿ ಮಾಧ್ಯಮವನ್ನು ಕೈಗೆತ್ತಿಕೊಂಡಿದ್ದರಿಂದ ಜನಸಮುದಾಯದಲ್ಲಿ ಅಡಗಿದ್ದ ವೈರುಧ್ಯಗಳನ್ನು ಇನ್ನಷ್ಟು ಗಹನವಾಗಿ ಅರಿಯಲು ಸಾಧ್ಯವಾಯಿತು.

Books from ಫ್ಯೋದರ್ ದೊಸ್ತೊಯವಿಸ್ಕಿ, Fyodor Dostoyevsky

Author-Image
ಫ್ಯೋದರ್ ದೊಸ್ತೊಯವಿಸ್ಕಿ, Fyodor Dostoyevsky

Similar Books