
ಇಲ್ಲಿನ ರಚನೆಗಳನ್ನು ಓದಿದಾಗ ಅವು ಜಗತ್ತಿನ ಸಾಹಿತ್ಯ, ಕಲೆ, ತತ್ವಜ್ಞಾನ ಎಲ್ಲವನ್ನೂ ನೆನಪಿಗೆ ತಂದು ಅನಂತ ಸಾಧ್ಯತೆಗಳ ಕೆಲಿಡೋಸ್ಕೋಪ್ ಚಿತ್ರಗಳನ್ನು ಹರಡುತ್ತವೆ. ಇಲ್ಲಿ ಬೊರೇಸ್ನ ಮಾಯಾಲೋಕ, ಕಲಾವಿದ ಕೀಪರ್, ಕತೆಗಾರ ಅಕುತಗವನ ಬೀಭತ್ಸಲೋಕ, ಕಾಫ್ಕ, ಸಿಂಗರ್ನ ಅಸಂಗತಲೋಕ – ಹೀಗೆ ಹಲವು ದರ್ಶನಗಳನ್ನು ಕಟ್ಟಿಕೊಡುತ್ತವೆ. ಹಕ್ಕಿಯ ರೆಕ್ಕೆಯ ಬಡಿತ ಮೂಡಿಸುವ ಸುಳಿಗಾಳಿಯ ಸೌಂದರ್ಯದಿಂದ ಅಣುಬಾಂಬಿನ ಅಣಬೆ ಮೋಡದ ಭಯಾನಕತೆಯವರೆಗೆ ಇಲ್ಲಿನ ಬರಹಗಳು ವ್ಯಾಪಿಸಿವೆ.
