ಡೂಡಲ್ : ಗೂಗಲ್ ಅಂಕಲ್ ಜೊತೆ ‘ಮಾತು-ಕತೆ’ ವಿದ್ವತ್ತು, ಪ್ರತಿಭೆ ಎರಡೂ ಇರುವ ಪ್ರೊಫೆಸರ್ ಹಾಗೂ ಅಗಾಧ ಜ್ಞಾನದ ಹಸಿವಿರುವ ಅವರ ಶಿಷ್ಯ – ಇವರಿಬ್ಬರ ಹರಟೆ ರೂಪದ ಮಾತುಕತೆಯೇ ಈ ಕೃತಿಯ ಹೂರಣ. ಎಷ್ಟೋ ಜನರಿಗೆ ಗೊತ್ತೇ ಇಲ್ಲದ ಅನೇಕ ವಿವರಗಳು ಓದುಗರಿಗೆ ಇಲ್ಲಿ ಲಭ್ಯವಾಗುತ್ತವೆ. ಸ್ವಾರಸ್ಯಕರವಾದ ಹಲವು ಸನ್ನಿವೇಶಗಳು, ಘಟನೆಗಳು ಈ ಕೃತಿಯಲ್ಲಿ ಮೂಡಿಬಂದಿವೆ. ಎಳೆಯರು ಮತ್ತು ಹಿರಿಯರ ನಡುವಿನ ಮಾತುಕತೆ ತುಂಬ ಮೌಲ್ಯಯುತವಾಗಿರುತ್ತದೆ. ಮಗುವಿಗೆ ಪ್ರಶ್ನಿಸಲು ಅವಕಾಶ ಮತ್ತು ಕುತೂಹಲ ಇರಬೇಕು. ಕುತೂಹಲ ತಣಿಸುವ ಪ್ರಾಜ್ಞರಿರಬೇಕು. ಆಗಲೇ ಇಂಥ ಕೃತಿಗಳ ಮೂಲಕ ಓದುಗರ ಜ್ಞಾನಭಂಡಾರ ಬೆಳೆದೀತು. ಇಂದಿರಾ ಕುಮಾರಿ ‘ಕಲ್ಲುಗಳು ನೀರು ಕುಡಿಯುತ್ತವೆಯೇ? ಎವರೆಸ್ಟ್ ಪರ್ವತದ ಎತ್ತರ ಅಳೆಯುವುದಕ್ಕೂ ಟಿಪ್ಪು ಸುಲ್ತಾನನೊಡನೆ ನಡೆದ ಶ್ರೀರಂಗಪಟ್ಟಣದ ಯುದ್ದಕ್ಕೂ ಸಂಬಂಧವಿದೆಯೇ? ಈಸ್ಟರ್ ದ್ವೀಪದ ಪ್ರತಿಮೆಗಳಿಗೆ ಕೈಕಾಲುಗಳಿವೆಯೇ? ಟೆಲಿಸ್ಕೋಪ್ ಮಾಡಿ ಗ್ರಹತಾರೆಗಳನ್ನು ನೋಡಬಹುದೇ? ರೆಪೆಷಾಜ್ ಎಂದರೇನು? ರಾಬಿನ್ ಹುಡ್ ಇದ್ದನೇ? ಕಿಂದರಿ ಜೋಗಿ ಘಟನೆ ನಡೆದದ್ದು ನಿಜವೇ? ವೆಂಟ್ರಿಲಾಕ್ವಿಸಂ ನಾವೂ ಕಲಿಯಬಹುದೇ? ಭೂಗತ ನಗರಗಳ ಅನ್ವೇಷಣೆ ಕಲಿಕೆಗೆ ಸಹಕಾರಿಯೇ? ಹೀಗೆ ಹತ್ತು ಹಲವು ಕುತೂಹಲಕರ ಪ್ರಶ್ನೆಗಳ ಬೆನ್ನುಹತ್ತಿದ ಬಾಲಕಿಯೊಬ್ಬಳು ಹಿರಿಯ ಪ್ರೊಫೆಸರ್ ಜೊತೆ ಮಾತುಕತೆ ನಡೆಸುತ್ತಾ, ಸೂಕ್ತ ಉತ್ತರಗಳನ್ನು ಕಂಡುಕೊಳ್ಳುವ ಬೌದ್ಧಿಕ ಪಯಣವೇ ಈ ‘ಡೂಡಲ್ – ಗೂಗಲ್ ಅಂಕಲ್ ಜೊತೆ ಮಾತು-ಕತೆ’. ಕುತೂಹಲಕರ ವಿಷಯಗಳನ್ನು ಮಾಹಿತಿ ಸಾಹಿತ್ಯ ರೂಪದಲ್ಲಿ ತಲುಪಿಸಿ, ಆಸಕ್ತಿ ಕೆರಳಿಸಿ, ಹೆಚ್ಚಿನ ಓದಿಗೆ ಪ್ರೇರೇಪಿಸುವ ಈ ಕೃತಿಯನ್ನು ಮಕ್ಕಳ ಕೈಗಳಲ್ಲಿಡುವ ಜವಾಬ್ದಾರಿ ನಮ್ಮದಲ್ಲವೇ? ಸಂತಸ ಕಲಿಕೆ ಸಾಕಾರವಾಗಲಿ! https://navakarnataka.com/doodle-google-uncle-jote-maatu-kate