ನಮ್ಮ ದನಿ : ಅದರ ರೂಪ ಹಾಗೂ ಸ್ವಯಂ ಚಿಕಿತ್ಸೆ

ದನಿ ಅಥವಾ ಧ್ವನಿಯ ಜೀವಿಗಳಲ್ಲೆಲ್ಲ ಇರುವುದಾದರೂ ಮನುಷ್ಯರಲ್ಲಿ ಅದು ಪರಿವರ್ತನೆಯಾಗಿ ಮಾತಿನ ತನಕ ಬಂದಿರುತ್ತದೆ. ನಮ್ಮ ಮೊದಲ ದನಿಯು ಅಳುವಿನ ಮೂಲಕ ವ್ಯಕ್ತವಾಗುವುದಲ್ಲವೇ? ಅಭಿಪ್ರಾಯ ವ್ಯಕ್ತಪಡಿಸಲು ದನಿ ಅತ್ಯವಶ್ಯ. ಇದರ ಬಗೆಗೆ ಕೆಲವು ಮಾಹಿತಿಗಳನ್ನು ನೀಡುತ್ತ, ಧ್ವನಿಪೆಟ್ಟಿಗೆ ಮತ್ತು ಮಾತು ಹೊರಡುವ ಬಗ್ಗೆ ವೈದ್ಯರಾಗಿರುವ ಲೇಖಕರು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಧ್ವನಿ ಬದಲಾವಣೆಯ ತಂತ್ರವನ್ನು ಅಭ್ಯಾಸದ ಮೂಲಕ ಕರಗತ ಮಾಡಿಕೊಳ್ಳುವುದು ಹೇಗೆಂಬುದನ್ನು ವಿವರವಾಗಿ ತಿಳಿಸಿದ್ದಾರೆ. ಒಬ್ಬರ ಧ್ವನಿಯು ಇನ್ನೊಬ್ಬರದಂತಿರುವುದಿಲ್ಲ; ಆದರೆ ದನಿಯ ಅನುಕರಣೆ ಸಾಧ್ಯ ಹಾಗೂ ಹಿನ್ನೆಲೆ ಗಾಯಕರಿಗೆ ಇದು ಉಪಯೋಗಕ್ಕೆ ಬರುತ್ತದೆ. ಧ್ವನಿ ಚಿಕಿತ್ಸೆ ಬಗೆಗೆ ಇಲ್ಲಿ ಹಲವಾರು ಮಾಹಿತಿಗಳಿವೆ.

Leave a Reply

Your email address will not be published. Required fields are marked *