
ರಾಸಾಯನಿಕ ವಸ್ತು ಮತ್ತು ರಾಸಾಯನಿಕ ಕ್ರಿಯೆಯಿಲ್ಲದ ಜಗತ್ತನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ರಾಸಾಯನಿಕ ಕ್ರಿಯೆಗಳು ಪ್ರಯೋಗಶಾಲೆಗೆ ಮಾತ್ರ ಸೀಮಿತವಲ್ಲ. ಭೂಮಿಯ ಒಳಗೆ ಮತ್ತು ಮೇಲಿರುವ ಎಲ್ಲ ವಸ್ತುಗಳು, ಜೀವಿಗಳು, ಪರಿಸರ, ಇವೆಲ್ಲವುಗಳು ರಾಸಾಯನಿಕ ವಸ್ತುಗಳಿಂದ ಮಾಡಲ್ಪಟ್ಟಿವೆ. ಇವುಗಳಲ್ಲಿ ನಡೆಯುವ ಬಹಳಷ್ಟು ಚಟುವಟಿಕೆಗಳು ಅಸಂಖ್ಯ ರಾಸಾಯನಿಕ ಕ್ರಿಯೆಗಳಿಂದ ಕೂಡಿವೆ. ಗಾಳಿ, ನೀರು, ಬೆಂಕಿ, ಮಣ್ಣು, ಮಳೆ, ಸಸ್ಯವರ್ಗಗಳ ಬೆಳವಣಿಗೆ, ಹೂ ವಿಕಸನೆ, ಹಣ್ಣು ಮಾಗುವಿಕೆ, ಉಸಿರಾಟ, ಪಚನಕ್ರಿಯೆ, ನರ ಮತ್ತು ಗ್ರಂಥಿಗಳ ಸಂವೇದನೆ, ಅಂಗಾಂಗಗಳ ರಚನೆ, ಅವಯವಗಳ ಚಲನೆ, ಸಂತಾನ ಮತ್ತು ಇತರ ಪ್ರಕೃತಿ ಸಹಜ ಕ್ರಿಯೆಗಳು ಹಾಗೂ ಭೂಮಿಯ ಮೇಲೆ ಮತ್ತು ಪರಿಸರದಲ್ಲಿ ಕಾಣುವ ಬಹಳಷ್ಟು ಮಾರ್ಪಾಡುಗಳು ಇವೆಲ್ಲವೂ ರಾಸಾಯನಿಕ ಸಂಬಂಧಿತ ಕ್ರಿಯೆಗಳು. ಪ್ರೊ. ಬಿ. ಎಸ್. ಜೈಪ್ರಕಾಶ್ : 1976ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಪದವಿಯನ್ನು ಪಡೆದ ಜೈಪ್ರಕಾಶ್, ಒಂದು ದಶಕಕ್ಕೂ ಹೆಚ್ಚಾಗಿ ಬೆಂಗಳೂರು ವಿಶ್ವವಿದ್ಯಾನಿಲಯದ ರಸಾಯನವಿಜ್ಞಾನ ವಿಭಾಗದಲ್ಲಿ ಸೇವೆ ಸಲ್ಲಿಸಿ 1980ರಲ್ಲಿ ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿ.ಐ.ಟಿ.) ರಸಾಯನವಿಜ್ಞಾನದ ಪ್ರಾಧ್ಯಾಪಕರಾಗಿ ನಂತರ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿದರು. ಡಾ. ಜೈಪ್ರಕಾಶ್ ಎಂಜಿನಿಯರಿಂಗ್ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆಯಲ್ಲಿ ತೊಡಗಿಸಿಕೊಂಡಿದ್ದು, ಜನಪ್ರಿಯ ವಿಜ್ಞಾನ ಮತ್ತು ವಿಜ್ಞಾನ ಸಂಶೋಧನೆಗೆ ಸಂಬಂಧಿಸಿದಂತೆ ಒಂದು ನೂರಕ್ಕೂ ಹೆಚ್ಚಿನ ಲೇಖನಗಳನ್ನು ಮಂಡಿಸಿದ್ದಾರೆ. ಶ್ರೀಯುತರು ‘ಕನ್ನಡ ಅರವಿಂದ ಪ್ರಶಸ್ತಿ’ ಪುರಸ್ಕೃತರು. ವೇಣುಗೋಪಾಲ್ ಮತ್ತು ಜೈಪ್ರಕಾಶ್ ಬರೆದು ಪ್ರಕಟಿಸಿದ ‘ರಸಾಯನb ವಿಜ್ಞಾನ ಬೆಳೆದ ಹಾದಿ’ ಕೃತಿಯು ಕರ್ನಾಟಕ ಸರ್ಕಾರದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕೆಡೆಮಿಯ 2017ರ ‘ಶ್ರೇಷ್ಠ ವಿಜ್ಞಾನ ಲೇಖಕ’ ಪ್ರಶಸ್ತಿಯಿಂದ ಪುರಸ್ಕೃತವಾಗಿದೆ.https://navakarnataka.com/panchabhootagala-raasaayanika-vyvidhya-moola-vijnaana-bhinnavaagi-yochisi-book-2