20ನೆಯ ಶತಮಾನದ ಪೂರ್ವಾರ್ಧದಲ್ಲೇ ಮಕ್ಕಳ ಶಿಕ್ಷಣದ ಬಗ್ಗೆ ಹೊಸ ವಿಚಾರ ಬಯಸಿ ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟು ಬೋಧನ ಕ್ರಮವನ್ನೇ ಬದಲಿಸಿದವರುಯ ಶಿಕ್ಷಣ ಚಿಂತಕ ಗಿಜುಭಾಯ್ ಬಧೇಕ. ವಿಪುಲ ಬಾಲ ಸಾಹಿತ್ಯವನ್ನೂ ಸೃಷ್ಟಿಸಿ ಮಕ್ಕಳ ಮನ ಗೆದ್ದು ಪರಿವರ್ತನ ಪಥದಲ್ಲಿ ಸಾಗಿ ಹಲವು ಅಡೆತಡೆಗಳು ಬಂದರೂ ಧೃತಿಗೆಡದೆ ಯಶ ಗಳಿಸಿದರು. ಈ ಕೃತಿ ಅವರ ಬದುಕಿನ ಸಮಗ್ರ ಚಿತ್ರಣವನ್ನು ನೀಡುತ್ತದೆ.
