
ಭೌತವಿಜ್ಞಾನದಲ್ಲಿ ವಿದ್ಯಾರ್ಥಿಗಳಿಗೆ ಎದುರಾಗುವ ಜಟಿಲ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಲು ಈ ಪುಸ್ತಕ ಸಹಕಾರಿ ಯಾಗಿದೆ. ಚಿತ್ರಸಹಿತವಾದ ವಿವರಣೆಯೊಂದಿಗೆ ಭೌತ ನಿಯಮಗಳಿಗನುಸಾರವಾಗಿ ನಡೆಯುವ ವಿದ್ಯಮಾನಗಳು ನಮಗೆ ಹೆಚ್ಚಿನ ಮಾಹಿತಿ ನೀಡುತ್ತವೆ. ಭೌತವಿಜ್ಞಾನದಲ್ಲಿನ ವಿವಿಧ ಶಾಖೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳಿವೆ ಹಾಗೂ ಸಮಂಜಸ ಉತ್ತರಗಳೂ ಇವೆ. ಯಾವುದೇ ಸಂದರ್ಭದಲ್ಲೂ ಎಷ್ಟೇ ಅನ್ವೇಷಣೆಗಳಾದರೂ ಮೂಲ ಭೌತಿಕ ನಿಯಮಗಳು ಬದಲಾಗುವುದಿಲ್ಲವೆಂಬ ಸತ್ಯ ಗೋಚರವಾಗುವುದು.