![](https://navakarnataka.com/blog/wp-content/uploads/2025/01/books-667395213-ramya-priti-vijnana-matu-pr-2.jpg)
ಸಂಸ್ಕೃತಿ ಎಂದರೆ ಶಿಷ್ಟರ ಆಚಾರ-ವ್ಯವಹಾರಗಳು ಮತ್ತು ಚಿಂತನೆ ಮಾತ್ರ ಎನ್ನುವ ಮಿಥ್ಯೆ ನಮ್ಮ ವಿದ್ವಾಂಸರಲ್ಲಿ ಇಂದಿಗೂ ಪ್ರಚಲಿತವಾಗಿದೆ. ಅದು ಇನ್ನೂ ಹೆಚ್ಚು ಪ್ರಬಲವಾಗಿದ್ದ 1960ರ ದಶಕದಲ್ಲಿ ದೇವಿಪ್ರಸಾದ ಚಟ್ಟೋಪಾಧ್ಯಾಯ ಲೋಕಾಯತ ಗ್ರಂಥವನ್ನು ಪ್ರಕಟಿಸಿ ಭಾರತೀಯ ಪರಂಪರೆಯಲ್ಲಿ ಭೌತವಾದಿ ಚಿಂತನೆ ಎಷ್ಟು ವ್ಯಾಪಕವಾಗಿದೆ ಮತ್ತು ಆಳವಾಗಿ ಬೇರೂರಿದೆ ಎಂಬುದನ್ನು ಆಧಾರ ಸಹಿತ ಅಧಿಕಾರಯುತವಾಗಿ ಪ್ರಚುರಪಡಿಸಿದರು. ಈವರೆಗೆ ಈ ಕೃತಿ ಭಾರತ ಮತ್ತು ವಿದೇಶಗಳ ಹಲವಾರು ಭಾಷೆಗಳಲ್ಲಿ ಲಭ್ಯವಿದ್ದು ಈಗ ಮೊದಲ ಬಾರಿಗೆ ಸಮಗ್ರವಾಗಿ ಕನ್ನಡದಲ್ಲಿ ಬಂದಿದೆ. ಲೋಕಾಯತ ಗ್ರಂಥವು ಭಾರತದ ಸಂಸ್ಕೃತಿ, ಆಚರಣೆಗಳು ಮತ್ತು ತತ್ವಶಾಸ್ತ್ರ ತಿಳಿಯಲು ಪ್ರಶಸ್ತವಾದ ಆಕರ ಗ್ರಂಥ. https://navakarnataka.com/lokayata