ಅತ್ಯುತ್ತಮವಾದ ವಿಮರ್ಶಾ ಕೃತಿ. ವಿಮರ್ಶಕ ಬಾಲಸುಬ್ರಹ್ಮಣ್ಯ ಕಂಜರ್ಪಣೆ. ವಿಮರ್ಶೆಯೆಂದರೆ ಹೊಗಳು ತೆಗಳುವಿಕೆ ಅಲ್ಲ. ವಿಷಯಗಳ ಮೌಲ್ಯಮಾಪನ. ಇಲ್ಲಿನ ತಮ್ಮ ದೃಷ್ಟಿಕೋನದಿಂದ ಅಂದಿನ ಸಾಮಾಜಿಕ ಇಂದಿನ ಆಧುನಿಕ ಜಗತ್ತನ್ನು ವಿಶ್ಲೇಷಣೆಗೆ ಒಳಪಡಿಸಿದ ಅನನ್ಯ ಕೃತಿಯಿದು. ಇದು ಒಂದೇ ಕೃತಿ, ಒಬ್ಬನೇ ಲೇಖಕ, ಒಂದೇ ವಿಷಯವನ್ನು ಅವಲಂಬಿಸಿಲ್ಲ. ಸಮಾಜದ ಎಲ್ಲ ಸ್ತರಗಳಲ್ಲೂ ಒಳಹೊಕ್ಕು, ಹರಿದಾಡಿ, ವಿಮರ್ಶಿಸಿದ ಅಭೂತಪೂರ್ವ ವಿಶ್ಲೇಷಣೆ, ಅತ್ಯುತ್ತಮ ಶೈಲಿ ಮತ್ತು ಭಾಷೆ. ಈ ವಿಮರ್ಶಾ ಪ್ರತಿಭೆ ಎಲೆಮರೆಯ ಕಾಯಿ, ಎಲೆ ಸರಿಸಿದರೆ ಮಾತ್ರ ಗೋಚರ, ಕಂಜರ್ಪಣೆಯವರ ವಿಶಾಲ ಓದು, ಸರಿಯಾದ ಗ್ರಹಿಕೆ ಪ್ರಬಂಧಗಳನ್ನು ಬರೆಯಿಸಿದೆ ಎಂದರೆ ಅತಿಶಯೋಕ್ತಿ ಅಲ್ಲ. ಇವರು ಇಲ್ಲಿ ವಿಶ್ಲೇಷಣೆಗೊಳಪಡಿಸಿದ ಹಲವಾರು ಪುಸ್ತಕಗಳನ್ನು ನಾವೊಮ್ಮೆ ಓದಬೇಕೆಂದು ಅನ್ನಿಸುವುದು ಸಹಜ !https://navakarnataka.com/loka-kathana
