ನೋಡುವವರಿಗೆ ದಿಗಿಲು ಹುಟ್ಟಿಸುವಂಥ, ಕುತೂಹಲ ಕೆರಳಿಸುವಂಥ ಮತ್ತು ಸೋಜಿಗವೆನಿಸುವಂಥ ಅನೇಕ ನಿಗೂಢ ರಚನೆಗಳನ್ನು ಪ್ರಕೃತಿ ಸೃಷ್ಟಿಸಿದೆ. ಕೆಲವು ರಚನೆಗಳು ಭೂಮಿಯ ಒಳಗಡೆಯಲ್ಲಿರಬಹುದು, ಕೆಲವು ಭೂಮಿಯ ಮೇಲಿರಬಹುದು, ಕೆಲವು ಬೆಟ್ಟಗಳಲ್ಲಿರಬಹುದು, ಇನ್ನೂ ಕೆಲವು ನೀರಿನಲ್ಲಿರಬಹುದು. ಇಂಥ ಅನೇಕ ನಿಗೂಢ ರಚನೆಗಳ ಬಗ್ಗೆ ಸಾಕಷ್ಟು ಅಧ್ಯಯನಗಳನ್ನು ಮಾಡಲಾಗಿದೆ. ಕೆಲವು ಪ್ರಸಂಗಗಳಲ್ಲಿ ನಿಖರವಾದ ವೈಜ್ಞಾನಿಕ ಕಾರಣಗಳನ್ನು ಕಂಡು ಹಿಡಿಯಲಾಗಿದೆ. ಆದರೆ ನಿಗೂಢವಾಗಿರುವಂಥ ರಚನೆಗಳು ಎಲ್ಲ ಕ್ಷೇತ್ರಗಳ ಜನರನ್ನು ಹೆಚ್ಚು ಹೆಚ್ಚು ಆಕರ್ಷಿಸುತ್ತಲೇ ಇವೆ.
