ಸ್ವಾಮಿ ವಿವೇಕಾನಂದ : ವ್ಯಕ್ತಿತ್ವದ ನೈಜ ಅನಾವರಣ

ಸ್ವಾಮಿ ವಿವೇಕಾನಂದ : ವ್ಯಕ್ತಿತ್ವದ ನೈಜ ಅನಾವರಣ ವಿವೇಕಾನಂದರ ಜೀವನ ಮತ್ತು ವಿಚಾರಗಳ ಬಗೆಗೆ ಕಳೆದ ನೂರು ವರ್ಷಗಳಲ್ಲಿ ಸಾಕಷ್ಟು ಬರೆಯಲಾಗಿದೆ. ಖೇದದ ಸಂಗತಿ ಎಂದರೆ ಈ ಬರಹಗಳೆಲ್ಲ 19ನೇ ಶತಮಾನದ ಆ ಯುವಕನ ಮಾನಸಿಕ ಸಾಮರ್ಥ್ಯ, ಜೀವನ ಸಂಘರ್ಷ, ವೈಚಾರಿಕ ಮತ್ತು ಯುಗಪ್ರವರ್ತಕ ಕಾರ್ಯಗಳಿಗೆ ಆಧ್ಯಾತ್ಮವಾದಿ ಪಾರ ಲೌಕಿಕ ವ್ಯಾಖ್ಯೆಯನ್ನು ನೀಡಿ ಅದನ್ನು ಒಂದು ಮಿಥಿಕ್ ರೂಪದಲ್ಲಿ ಬದಲಾಯಿಸುತ್ತವೆ. ಅದರ ಸತ್ವವನ್ನೇ ಹೊಸಕಿ ಹಾಕುತ್ತವೆ. ಈ ಕೃತಿಯು ಪ್ರಮಾಣ ಸಹಿತ, ಖಚಿತವಾದ ತಪಶೀಲಿನೊಂದಿಗೆ ಆ ವಿವೇಕಾನಂದರನ್ನು, ಅವರ ವಾಸ್ತವ ರೂಪವನ್ನು ತೆರೆದಿಡುತ್ತದೆ. ಇದೊಂದು ಮಹಾಜೀವನದ ಎಂಥ ಪ್ರಾಮಾಣಿಕ ಗಾಥೆ ಎಂದರೆ, ಅವರ ಕಾರ್ಯಗಳನ್ನು, ಆಲೋಚನ ಕ್ರಮವನ್ನು ಮತ್ತು ಯುಗವನ್ನು ಯಥಾವತ್ತಾಗಿ ಚಿತ್ರಿಸುತ್ತದೆ. ಇದು ವಿವೇಕಾನಂದರನ್ನು ಅರ್ಥಮಾಡಿಕೊಳ್ಳುವ ಏಕೈಕ ಮತ್ತು ಅನನ್ಯವಾದ ಬೌದ್ಧಿಕ ಕಾರ್ಯವಾಗಿದೆ.https://navakarnataka.com/swami-vivekananda-1

Leave a Reply

Your email address will not be published. Required fields are marked *