Phone icon  CALL US NOW
080 - 22161900

  • ಕರಾವಳಿಯ ಚರಿತ್ರೆಯಲ್ಲಿ ಹೈದರ ಅಲಿ ಮತ್ತು ಟಿಪ್ಪುಸುಲ್ತಾನ್|Karavaliya Caritreyalli Hyder Ali Mattu Tippu Sultan
ಕರಾವಳಿಯ ಚರಿತ್ರೆಯಲ್ಲಿ ಹೈದರ ಅಲಿ ಮತ್ತು ಟಿಪ್ಪುಸುಲ್ತಾನ್|Karavaliya Caritreyalli Hyder Ali Mattu Tippu Sultan
10%

MRP - ₹180.00 ₹162.00

ಇತಿಹಾಸಕಾರನಿಗೆ ಬದಲಾಗುತ್ತಿರುವ ರಾಜಕೀಯದೊಡನೆ ಅಂಥ ಸಂಬಂಧವೇನೂ ಇರುವುದಿಲ್ಲ. ಆತನ ಸಂಬಂಧ ಇರುವುದು ತನ್ನ ಕೈಯೊಳಗಿರುವ ಮಾಹಿತಿಗಳೊಂದಿಗೆ ಮಾತ್ರ ಹೊಸ ಮಾಹಿತಿಗಳು ದೊರೆತಾಗ ಚರಿತ್ರೆಕಾರನು ತನ್ನ ಮೊದಲಿನ ನಿಲುವುಗಳನ್ನು ಬದಲಾಯಿಸಿಕೊಳ್ಳುತ್ತಾನೆ. ಆದರೆ ಕೋಮುವಾದಿ ಚರಿತ್ರೆಕಾರರ ರೀತಿಯೇ ಬೇರೆ. ಅವರು ಅಧಿಕಾರ ಸ್ಥಾಪನೆಯ ಉದ್ದೇಶಕ್ಕೆ ಇತಿಹಾಸವನ್ನು ತಮಗೆ ಬೇಕಾದಂತೆ ತಿರುಚುತ್ತಾರೆ ಮತ್ತು ಸುಳ್ಳು ಮಾಹಿತಿಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಕೋಮುವಾದವು ಒಂದು ನಿರ್ದಿಷ್ಟ ಧಾರ್ಮಿಕ ಸಮುದಾಯಕ್ಕೆ ಸೇರಿದವರ ಸಂಕುಚಿತ ಭಾವನೆಯಾಗಿದ್ದು, ಇತರ ಧಾರ್ಮಿಕ ಸಮುದಾಯಗಳಿಗೆ ಸೇರಿದ ಜನರನ್ನು ಸಹಿಸುವುದಿಲ್ಲ ಮತ್ತು ಗೌರವಿಸುವುದಿಲ್ಲ. ವಿವಿಧ ಧರ್ಮಗಳಿಗೆ ಸೇರಿದ ಜನರು ಒಂದೇ ರಾಷ್ಟ್ರದೊಳಗೆ ಸಮಾನ ನಾಗರಿಕರಾಗಿ ಬದುಕಲು ಸಾಧ್ಯವಿಲ್ಲ ಎಂಬುದು ಕೋಮುವಾದಿಗಳ ಬಲವಾದ ನಂಬಿಕೆ. ಆದರೆ ಭಾರತದ ಇತಿಹಾಸ ಇದನ್ನು ನಂಬುವುದೂ ಇಲ್ಲ. ಒಪ್ಪುವುದೂ ಇಲ್ಲ. ಚುನಾವಣೆಯ ಸಂದರ್ಭದಲ್ಲಿ ಹುಟ್ಟಿಕೊಂಡ ಉರಿಗೌಡ ಮತ್ತು ನಂಜೇಗೌಡರ ಕತೆ ಕೊನೆಗೆ ಏನಾಯಿತೆಂದು ನಮಗೆಲ್ಲಾ ಗೊತ್ತೇ ಇದೆ. ಪ್ರಸ್ತುತ ಪುಸ್ತಕದಲ್ಲಿ ಲೇಖಕ ನವೀನ್ ಸೂರಿಂಜೆಯವರು ಹೈದರ್ ಮತ್ತು ಟಿಪ್ಪುವಿನ ಬಗೆಗೆ ಈಗಾಗಲೇ ಲಭ್ಯವಿರುವ ಅನೇಕ ಮಾಹಿತಿಗಳನ್ನು ಮರುಜೋಡಿಸಿ, ಕೋಮುವಾದಿಗಳು ಕಟ್ಟಿದ ಚರಿತ್ರೆಯನ್ನು ಸಮರ್ಥವಾಗಿ ಒಡೆದಿದ್ದಾರೆ. ರಾಜ ಪ್ರಭುತ್ವವು ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಅನೇಕ ಬಗೆಯ ತಂತ್ರಗಳನ್ನು ಹೆಣೆಯುತ್ತದೆ. ವಿರೋಧಿಗಳನ್ನು ಮಟ್ಟ ಹಾಕುತ್ತದೆ. ಸಮುದಾಯಗಳನ್ನು ಬಳಸಿಕೊಳ್ಳುತ್ತದೆ. ಈ ಪುಟ್ಟ ಪುಸ್ತಕದಲ್ಲಿ ಅವೆಲ್ಲವೂ ಇವೆ. ಕರಾವಳಿಯ ಅಜಿಲರು, ಬಂಗರು, ಚೌಟರು, ಹೆಗ್ಗಡೆಯವರು, ಕೊಡವರು, ಕ್ರಿಶ್ಚಿಯನ್ನರು, ಮುಸಲ್ಮಾನರು, ಕೊಂಕಣಿಯರು, ಗೌಡರು. ಜೈನರು ಹೀಗೆ ಎಲ್ಲರೂ ಪ್ರಭುತ್ವದೊಡನೆ ಘರ್ಷಿಸುತ್ತಾರೆ. ಇಲ್ಲವೇ ಸ್ನೇಹ ಬೆಳೆಸಿಕೊಳ್ಳುತ್ತಾರೆ. ಇಲ್ಲಿ ಕೋಮುವಾದ ಎಲ್ಲಿ ಬಂತು? ಕರಾವಳಿಯ ಇತಿಹಾಸವನ್ನು ಬರೆದ ಪೊಳಲಿ ಶೀನಪ್ಪ ಹೆಗ್ಗಡೆ, ಕೇಶವ ಕೃಷ್ಣ ಕುಡ್ಡ, ಬಿ. ಎ. ಸಾಲೆತ್ತೂರ್, ಪಿ. ಗುರುರಾಜ್ ಭಟ್ ಮೊದಲಾದ ವಿದ್ವಾಂಸರು ಹೈದರ್ ಮತ್ತು ಟಿಪ್ಪವನ್ನು ಕೋಮುವಾದಿಗಳೆಂದು ಕರೆದೇ ಇಲ್ಲ. ನವೀನ್ ಸೂರಿಂಜೆ ಈ ಪುಸ್ತಕದ ಮೂಲಕ ಅಂಥ ವಿದ್ವತ್ ಪರಂಪರೆಯನ್ನು ಮುಂದುವರೆಸಿದ್ದಾರೆ. ಅವರಿಗೆ ಅಭಿನಂದನೆಗಳು. ಪ್ರೊ. ಪುರುಷೋತ್ತಮ ಬಿಳಿಮಲೆ

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2026
: Paperback
: 1/8 Demy Size
: B-005557
: .150

ಇತಿಹಾಸಕಾರನಿಗೆ ಬದಲಾಗುತ್ತಿರುವ ರಾಜಕೀಯದೊಡನೆ ಅಂಥ ಸಂಬಂಧವೇನೂ ಇರುವುದಿಲ್ಲ. ಆತನ ಸಂಬಂಧ ಇರುವುದು ತನ್ನ ಕೈಯೊಳಗಿರುವ ಮಾಹಿತಿಗಳೊಂದಿಗೆ ಮಾತ್ರ ಹೊಸ ಮಾಹಿತಿಗಳು ದೊರೆತಾಗ ಚರಿತ್ರೆಕಾರನು ತನ್ನ ಮೊದಲಿನ ನಿಲುವುಗಳನ್ನು ಬದಲಾಯಿಸಿಕೊಳ್ಳುತ್ತಾನೆ. ಆದರೆ ಕೋಮುವಾದಿ ಚರಿತ್ರೆಕಾರರ ರೀತಿಯೇ ಬೇರೆ. ಅವರು ಅಧಿಕಾರ ಸ್ಥಾಪನೆಯ ಉದ್ದೇಶಕ್ಕೆ ಇತಿಹಾಸವನ್ನು ತಮಗೆ ಬೇಕಾದಂತೆ ತಿರುಚುತ್ತಾರೆ ಮತ್ತು ಸುಳ್ಳು ಮಾಹಿತಿಗಳನ್ನು ಸೃಷ್ಟಿಸಿಕೊಳ್ಳುತ್ತಾರೆ. ಕೋಮುವಾದವು ಒಂದು ನಿರ್ದಿಷ್ಟ ಧಾರ್ಮಿಕ ಸಮುದಾಯಕ್ಕೆ ಸೇರಿದವರ ಸಂಕುಚಿತ ಭಾವನೆಯಾಗಿದ್ದು, ಇತರ ಧಾರ್ಮಿಕ ಸಮುದಾಯಗಳಿಗೆ ಸೇರಿದ ಜನರನ್ನು ಸಹಿಸುವುದಿಲ್ಲ ಮತ್ತು ಗೌರವಿಸುವುದಿಲ್ಲ. ವಿವಿಧ ಧರ್ಮಗಳಿಗೆ ಸೇರಿದ ಜನರು ಒಂದೇ ರಾಷ್ಟ್ರದೊಳಗೆ ಸಮಾನ ನಾಗರಿಕರಾಗಿ ಬದುಕಲು ಸಾಧ್ಯವಿಲ್ಲ ಎಂಬುದು ಕೋಮುವಾದಿಗಳ ಬಲವಾದ ನಂಬಿಕೆ. ಆದರೆ ಭಾರತದ ಇತಿಹಾಸ ಇದನ್ನು ನಂಬುವುದೂ ಇಲ್ಲ. ಒಪ್ಪುವುದೂ ಇಲ್ಲ. ಚುನಾವಣೆಯ ಸಂದರ್ಭದಲ್ಲಿ ಹುಟ್ಟಿಕೊಂಡ ಉರಿಗೌಡ ಮತ್ತು ನಂಜೇಗೌಡರ ಕತೆ ಕೊನೆಗೆ ಏನಾಯಿತೆಂದು ನಮಗೆಲ್ಲಾ ಗೊತ್ತೇ ಇದೆ. ಪ್ರಸ್ತುತ ಪುಸ್ತಕದಲ್ಲಿ ಲೇಖಕ ನವೀನ್ ಸೂರಿಂಜೆಯವರು ಹೈದರ್ ಮತ್ತು ಟಿಪ್ಪುವಿನ ಬಗೆಗೆ ಈಗಾಗಲೇ ಲಭ್ಯವಿರುವ ಅನೇಕ ಮಾಹಿತಿಗಳನ್ನು ಮರುಜೋಡಿಸಿ, ಕೋಮುವಾದಿಗಳು ಕಟ್ಟಿದ ಚರಿತ್ರೆಯನ್ನು ಸಮರ್ಥವಾಗಿ ಒಡೆದಿದ್ದಾರೆ. ರಾಜ ಪ್ರಭುತ್ವವು ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಅನೇಕ ಬಗೆಯ ತಂತ್ರಗಳನ್ನು ಹೆಣೆಯುತ್ತದೆ. ವಿರೋಧಿಗಳನ್ನು ಮಟ್ಟ ಹಾಕುತ್ತದೆ. ಸಮುದಾಯಗಳನ್ನು ಬಳಸಿಕೊಳ್ಳುತ್ತದೆ. ಈ ಪುಟ್ಟ ಪುಸ್ತಕದಲ್ಲಿ ಅವೆಲ್ಲವೂ ಇವೆ. ಕರಾವಳಿಯ ಅಜಿಲರು, ಬಂಗರು, ಚೌಟರು, ಹೆಗ್ಗಡೆಯವರು, ಕೊಡವರು, ಕ್ರಿಶ್ಚಿಯನ್ನರು, ಮುಸಲ್ಮಾನರು, ಕೊಂಕಣಿಯರು, ಗೌಡರು. ಜೈನರು ಹೀಗೆ ಎಲ್ಲರೂ ಪ್ರಭುತ್ವದೊಡನೆ ಘರ್ಷಿಸುತ್ತಾರೆ. ಇಲ್ಲವೇ ಸ್ನೇಹ ಬೆಳೆಸಿಕೊಳ್ಳುತ್ತಾರೆ. ಇಲ್ಲಿ ಕೋಮುವಾದ ಎಲ್ಲಿ ಬಂತು? ಕರಾವಳಿಯ ಇತಿಹಾಸವನ್ನು ಬರೆದ ಪೊಳಲಿ ಶೀನಪ್ಪ ಹೆಗ್ಗಡೆ, ಕೇಶವ ಕೃಷ್ಣ ಕುಡ್ಡ, ಬಿ. ಎ. ಸಾಲೆತ್ತೂರ್, ಪಿ. ಗುರುರಾಜ್ ಭಟ್ ಮೊದಲಾದ ವಿದ್ವಾಂಸರು ಹೈದರ್ ಮತ್ತು ಟಿಪ್ಪವನ್ನು ಕೋಮುವಾದಿಗಳೆಂದು ಕರೆದೇ ಇಲ್ಲ. ನವೀನ್ ಸೂರಿಂಜೆ ಈ ಪುಸ್ತಕದ ಮೂಲಕ ಅಂಥ ವಿದ್ವತ್ ಪರಂಪರೆಯನ್ನು ಮುಂದುವರೆಸಿದ್ದಾರೆ. ಅವರಿಗೆ ಅಭಿನಂದನೆಗಳು. ಪ್ರೊ. ಪುರುಷೋತ್ತಮ ಬಿಳಿಮಲೆ

Books from ನವೀನ್ ಸೂರಿಂಜೆ , Naveen Soorinje

Author-Image
ನವೀನ್ ಸೂರಿಂಜೆ , Naveen Soorinje

Similar Books