ನ್ಯೂಕ್ಲಿಯಸ್ : ಒಂದು ಪರಿಚಯ| Nucleus Ondu Parichaya
MRP - ₹250.00 ₹225.00
ವಿಜ್ಞಾನಿಗಳು ಮತ್ತು ಅವರ ತಪಸ್ಸಿನ ಸಾಧನೆಗಳಾದ ಆವಿಷ್ಕಾರಗಳೆಲ್ಲ ಈ ಕೃತಿಯಲ್ಲಿ ತುಂಬಿಕೊಂಡಿವೆ. ಹಲವಾರು ವರ್ಷಗಳಷ್ಟು ಕಾಲ ತಾಳ್ಮೆಯಿಂದ ಕಾದು ಅಣು- ರೇಣುಗಳನ್ನೂ ಜಾಲಾಡಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಇಂಥ ಮಹತ್ಸಾಧನೆಗಳನ್ನು ವಿವರಿಸಿ ಜೊತೆಗೆ ನಮ್ಮ ಜ್ಞಾನವನ್ನೂ ಹೆಚ್ಚಿಸುವ ಬರವಣಿಗೆಯಿದು. ನ್ಯೂಕ್ಲಿಯರ್ ಫಿಸಿಕ್ಸ್ ಬಗ್ಗೆ ಪರಿಚಯಿಸುವುದು ಇಲ್ಲಿನ ಮುಖ್ಯ ಉದ್ದೇಶವಾದರೂ ಇನ್ನಿತರ ಕಣವಿಜ್ಞಾನ, ವಿಕಿರಣ, ನ್ಯೂಕ್ಲಿಯಸ್, ಬೈಜಿಕ ಪ್ರಕ್ರಿಯೆ - ಶಕ್ತಿ, ಮಹಾಸ್ಪೋಟ, ಪರಮಾಣು - ಬಾಂಬ್ ಇತ್ಯಾದಿಗಳೂ ವಿಜ್ಞಾನದಲ್ಲಿ ಒಂದಕ್ಕೊಂದು ಪೂರಕವಾಗಿರುವುದರಿಂದ ಒಂದನ್ನು ಬಿಟ್ಟು ಇನ್ನೊಂದು ಇಲ್ಲ. ಭೌತವಿಜ್ಞಾನವೇ ಎಲ್ಲಕ್ಕೂ ಮೂಲವಾದ್ದರಿಂದ ಸಹಜವಾಗಿಯೇ ಇಲ್ಲಿನ ಬರಹಗಳು ಒಂದಕ್ಕೊಂದು ಸಂಬಂಧಿಸಿವೆ. ಪತ್ತೇಕಾರಿ ಉಪಕರಣಗಳು ಅತ್ಯಂತ ಮಹತ್ವದ್ದಾಗಿದ್ದು ಅವುಗಳ ಆವಿಷ್ಕಾರದಿಂದಾಗಿ ಇಂದು ವಿಜ್ಞಾನಿಗಳು ವಿಶ್ವವನ್ನೇ ತಮ್ಮ ಸನಿಹಕ್ಕೆ ಎಳೆದುಕೊಂಡಂತಾಗಿದೆ. ಒಟ್ಟಿನಲ್ಲಿ ಶಾಲಾ ಕಾಲೇಜಿನ ವಿಜ್ಞಾನದ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಪುಸ್ತಕವಿದು.
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications
ವಿಜ್ಞಾನಿಗಳು ಮತ್ತು ಅವರ ತಪಸ್ಸಿನ ಸಾಧನೆಗಳಾದ ಆವಿಷ್ಕಾರಗಳೆಲ್ಲ ಈ ಕೃತಿಯಲ್ಲಿ ತುಂಬಿಕೊಂಡಿವೆ. ಹಲವಾರು ವರ್ಷಗಳಷ್ಟು ಕಾಲ ತಾಳ್ಮೆಯಿಂದ ಕಾದು ಅಣು- ರೇಣುಗಳನ್ನೂ ಜಾಲಾಡಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಇಂಥ ಮಹತ್ಸಾಧನೆಗಳನ್ನು ವಿವರಿಸಿ ಜೊತೆಗೆ ನಮ್ಮ ಜ್ಞಾನವನ್ನೂ ಹೆಚ್ಚಿಸುವ ಬರವಣಿಗೆಯಿದು. ನ್ಯೂಕ್ಲಿಯರ್ ಫಿಸಿಕ್ಸ್ ಬಗ್ಗೆ ಪರಿಚಯಿಸುವುದು ಇಲ್ಲಿನ ಮುಖ್ಯ ಉದ್ದೇಶವಾದರೂ ಇನ್ನಿತರ ಕಣವಿಜ್ಞಾನ, ವಿಕಿರಣ, ನ್ಯೂಕ್ಲಿಯಸ್, ಬೈಜಿಕ ಪ್ರಕ್ರಿಯೆ - ಶಕ್ತಿ, ಮಹಾಸ್ಪೋಟ, ಪರಮಾಣು - ಬಾಂಬ್ ಇತ್ಯಾದಿಗಳೂ ವಿಜ್ಞಾನದಲ್ಲಿ ಒಂದಕ್ಕೊಂದು ಪೂರಕವಾಗಿರುವುದರಿಂದ ಒಂದನ್ನು ಬಿಟ್ಟು ಇನ್ನೊಂದು ಇಲ್ಲ. ಭೌತವಿಜ್ಞಾನವೇ ಎಲ್ಲಕ್ಕೂ ಮೂಲವಾದ್ದರಿಂದ ಸಹಜವಾಗಿಯೇ ಇಲ್ಲಿನ ಬರಹಗಳು ಒಂದಕ್ಕೊಂದು ಸಂಬಂಧಿಸಿವೆ. ಪತ್ತೇಕಾರಿ ಉಪಕರಣಗಳು ಅತ್ಯಂತ ಮಹತ್ವದ್ದಾಗಿದ್ದು ಅವುಗಳ ಆವಿಷ್ಕಾರದಿಂದಾಗಿ ಇಂದು ವಿಜ್ಞಾನಿಗಳು ವಿಶ್ವವನ್ನೇ ತಮ್ಮ ಸನಿಹಕ್ಕೆ ಎಳೆದುಕೊಂಡಂತಾಗಿದೆ. ಒಟ್ಟಿನಲ್ಲಿ ಶಾಲಾ ಕಾಲೇಜಿನ ವಿಜ್ಞಾನದ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಪುಸ್ತಕವಿದು.
ಡಾ. ಪಾಲಹಳ್ಳಿ ವಿಶ್ವನಾಥ್ ಅವರು ಮೈಸೂರು ಮತ್ತು ಮಿಚಿಗನ್ ವಿಶ್ವವಿದ್ಯಾಲಯಗಳಲ್ಲಿ ತಮ್ಮ ಶಿಕ್ಷಣವನ್ನು ಪಡೆದು ಮುಂಬೈನ ತಾತಾ ಮೂಲಭೂತ ಸಂಶೋಧನಾ ಸಂಸ್ಥೆ ಮತ್ತು ಬೆಂಗಳೂರಿನ ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿದ್ದರು. ಇವರು ಭಾರತ ಮತ್ತು ಅಮೆರಿಕದಲ್ಲಿ ನಡೆದ ಹಲವಾರು ದೊಡ್ಡ ಕಣವಿಜ್ಞಾನ ಮತ್ತು ಖಭೌತವಿಜ್ಞಾನಗಳ ಯೋಜನೆಗಳಲ್ಲಿ ಭಾಗಿಯಾಗಿದ್ದರು. ಕೋಲಾರದ ಚಿನ್ನದ ಗಣಿಗಳು, ಅಮೆರಿಕದ ಫರ್ಮಿ ಲ್ಯಾಬ್, ಹಿಮಾಲಯದ ಲಡಖ್ ಪರ್ವತಗಳು ಇತ್ಯಾದಿ ಇವರು ಪ್ರಯೋಗಗಳನ್ನು ನಡೆಸಿದ ಸ್ಥಳಗಳು. ಕಳೆದ ಎರಡು ದಶಕಗಳಲ್ಲಿ ವಿಜ್ಞಾನ ಸಂವಹನಕಾರರಾಗಿ ಅನೇಕ ಲೇಖನಗಳನ್ನು ಮತ್ತು ಜನಪ್ರಿಯ ಪುಸ್ತಕಗಳನ್ನು ಬರೆದಿದ್ದಾರೆ; ದೂರದರ್ಶನದ ಚರ್ಚೆಗಳಲ್ಲಿ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಹನ ಕಾರ್ಯಗಳಲ್ಲಿಯೂ ಭಾಗವಹಿಸಿದ್ದಾರೆ.
Books from ಪಾಲಹಳ್ಳಿ ವಿಶ್ವನಾಥ್, Palahalli Vishwanath
ಪಾಲಹಳ್ಳಿ ವಿಶ್ವನಾಥ್, Palahalli Vishwanath
About Author