ಐಲಾ ಮಲಿಕಾಳ ಪವಿತ್ರ ಪೆಟ್ಟಿಗೆ | Aila Malikaala Pavitra Pettige
MRP - ₹195.00 ₹175.50
ಪ್ರವಾಸ ಕಥನ
Dispatched within 2 - 3 Business Days
FREE Home Delivery (For purchase of Rs 499/- and above)
Product Specifications
ಪ್ರವಾಸ ಕಥನ
ಬೊಳುವಾರು ಮಹಮದ್ ಕುಂಞ 'ಕೇಂದ್ರ ಸಾಹಿತ್ಯ ಅಕಾಡೆಮಿ'ಯ ಇತಿಹಾಸದಲ್ಲಿ, ಸೃಜನಶೀಲ ಗದ್ಯಕೃತಿಗಳಿಗಾಗಿ ಎರಡು ಬಾರಿ ಪ್ರಶಸ್ತಿಗಳನ್ನು ಪಡೆದ ದೇಶದ ಏಕೈಕ ಸಾಹಿತಿ ಎಂಬ ದಾಖಲೆ ಬರೆದಿರುವ ಇವರು, ಕನ್ನಡದ ಮಕ್ಕಳ ಸಾಹಿತ್ಯಕ್ಕೆ 'ಕೇಂದ್ರ ಸಾಹಿತ್ಯ ಅಕಾಡೆಮಿ'ಯಿಂದ ಮೊತ್ತ ಮೊದಲ ಪ್ರಶಸ್ತಿಯನ್ನೂ ತಂದುಕೊಟ್ಟವರು. 'ಕರ್ನಾಟಕ ಸಾಹಿತ್ಯ ಅಕಾಡೆಮಿ' ಯಿಂದ ಗೌರವ ಪ್ರಶಸ್ತಿ ಸಹಿತ, ಮೂರು ಬಾರಿ ಪ್ರಶಸ್ತಿಗಳನ್ನು ಗಳಿಸಿರುವ ಇವರು, 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ'ಯಿಂದಲೂ ಸನ್ಮಾನಿತರು. ಕರಾವಳಿ ಕರ್ನಾಟಕದ ಬೊಳುವಾರು ಎಂಬಲ್ಲಿ 1951 ಅಕ್ಟೋಬರ 22ರಂದು ಜನಿಸಿದ ಬೊಳುವಾರು, ಮೈಸೂರು ವಿಶ್ವವಿದ್ಯಾಲಯದಿಂದ ಕುವೆಂಪು ಬಂಗಾರದ ಪದಕ ಸಹಿತ, ಕನ್ನಡ ಸ್ನಾತಕೋತ್ತರ ಪದವೀಧರರು. ಕನ್ನಡ ಗದ್ಯ ಸಾಹಿತ್ಯಕ್ಕೆ ಮುಸ್ಲಿಮ್ ಬದುಕನ್ನು ಮೊತ್ತಮೊದಲು ಪರಿಚಯಿಸಿದ ಇವರು, ಸುಮಾರು 250ಕ್ಕೂ ಹೆಚ್ಚು ಸಣ್ಣಕತೆಗಳನ್ನು ಬರೆದು ಕನ್ನಡದ ಪ್ರಮುಖ ಕತೆಗಾರರೆಂದು ಗುರುತಿಸಲ್ಪಟ್ಟಿದ್ದಾರೆ. "ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಇವರ 1111 ಪುಟಗಳ ಮಹಾ ಕಾದಂಬರಿ 'ಸ್ವಾತಂತ್ರ್ಯದ ಓಟ', ಪ್ರವಾದಿ ಮುಹಮ್ಮದರ ಜೀವನಾಧಾರಿತ ಜಗತ್ತಿನ ಮೊತ್ತ ಮೊದಲ ಐತಿಹಾಸಿಕ ಕಾದಂಬರಿ 'ಓದಿರಿ' ಹಾಗೂ ಪ್ರವಾದಿ ಪತ್ನಿಯರ ಸ್ವಗತಗಳನ್ನೊಳಗೊಂಡ 'ಉಮ್ಮಾ' ಕಾದಂಬರಿಗಳು ಇವರಿಗೆ ಕನ್ನಡ ಕಾದಂಬರಿ ಲೋಕದಲ್ಲಿ ಮಹತ್ವದ ಸ್ಥಾನ ನೀಡಿವೆ. ಕನ್ನಡ ಭಾಷೆಯಲ್ಲಿ ಮೊತ್ತ ಮೊದಲು ಪ್ರಕಟವಾಗಿದ್ದ ಮಕ್ಕಳ ಪದ್ಯದಿಂದಾರಂಭಿಸಿ 1975ರ ವರೆಗೆ ಪ್ರಕಟವಾಗಿರುವ ಪದ್ಯಗಳಿಂದ ಆರಿಸಿ ಸಂಪಾದಿಸಿದ್ದ 'ತಟ್ಟು ಚಪ್ಪಾಳೆ ಪುಟ್ಟ ಮಗು' ಕೃತಿ ಹಾಗೂ 'ಕೇಂದ್ರ ಸಾಹಿತ್ಯ ಅಕಾಡೆಮಿ' ಪ್ರಶಸ್ತಿ ಪಡೆದ 'ಪಾಪು ಗಾಂಧಿ, ಗಾಂಧಿ ಬಾಪು ಆದ ಕತೆ'ಗಳು ಇವರಿಗೆ ಮಕ್ಕಳ ಸಾಹಿತ್ಯದಲ್ಲೂ ದೊಡ್ಡ ಸ್ಥಾನ ನೀಡಿವೆ. ಕಲ್ಕತ್ತಾದ ಭಾರತೀಯ ಭಾಷಾ ಸಂಸ್ಥಾನ ಪ್ರಶಸ್ತಿ, ದೆಹಲಿಯ ಕಥಾ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಶಿವರಾಮ ಕಾರಂತ ಬಾಲವನ ಪ್ರಶಸ್ತಿ, ಬಸವರಾಜ ಕಟ್ಟಿಮನಿ ಪ್ರಶಸ್ತಿ, ವಿಶುಕುಮಾರ್ ಪ್ರಶಸ್ತಿ, ತೌಳವ ಪ್ರಶಸ್ತಿ, ಸೂರ್ಯನಾಥ ಚಡಗ ಪ್ರಶಸ್ತಿ, ಪರಶುರಾಮ ಪ್ರಶಸ್ತಿ, ಕರಾವಳಿ ಕಲಶ ಪ್ರಶಸ್ತಿ, ಅಬುದಾಬಿಯ ಬಿ.ಡಬ್ಲ್ಯೂ.ಎಫ್. ಅವಾರ್ಡ್, ಮುಸ್ಲಿಮ್ ಹಿರಿಯ ಸಾಹಿತಿ ಪ್ರಶಸ್ತಿ, ಬೆಂಗಳೂರು ಲಿಟರರಿ ಫೆಸ್ಟಿವಲ್ ಪ್ರಶಸ್ತಿ, ಸಿಂಧೇರತ್ನ ಪ್ರಶಸ್ತಿ, ಸಂದೇಶ ಪ್ರತಿಷ್ಠಾನ ಪ್ರಶಸ್ತಿ, ಆರಾಧನಾ ಪ್ರಶಸ್ತಿ, ವರ್ಷದ ಕನ್ನಡಿಗ ಪ್ರಶಸ್ತಿ ಮೊದಲಾದ ಮುವತ್ತಕ್ಕೂ ಹೆಚ್ಚು ಪ್ರಶಸ್ತಿಗಳಿಂದ ಸನ್ಮಾನಿತರಾಗಿರುವ ಇವರು ಚಲನ ಚಿತ್ರಗಳಿಗಾಗಿ ರಚಿಸಿರುವ ಕತೆ ಹಾಗೂ ಹಾಡುಗಳು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು
Books from ಬೊಳುವಾರು ಮಹಮದ್ ಕುಂಞ್, Bolwar Mahamad Kunhi
ಬೊಳುವಾರು ಮಹಮದ್ ಕುಂಞ್, Bolwar Mahamad Kunhi
About Author