Phone icon  CALL US NOW
080 - 22161900

  • ವಿಶ್ವದ ರಹಸ್ಯ ಭೇದಿಸಿದ ಭೌತವಿಜ್ಞಾನಿಗಳು | Vishwada Rahasya Bhedisida Bhoutavijnaanigalu
ವಿಶ್ವದ ರಹಸ್ಯ ಭೇದಿಸಿದ ಭೌತವಿಜ್ಞಾನಿಗಳು | Vishwada Rahasya Bhedisida Bhoutavijnaanigalu
10%

MRP - ₹295.00 ₹265.50

ಭೌತವಿಜ್ಞಾನದ 145 ಶ್ರೇಷ್ಠ ವಿಜ್ಞಾನಿಗಳ ಸಿದ್ದಿ ಸಾಧನೆಗಳನ್ನು ಪರಿಚಯಿಸಿರುವ ಕೃತಿಯಿದು. ವಿಜ್ಞಾನ ಕ್ಷೇತ್ರದ ಆವಿಷ್ಕಾರಗಳು ಸರಪಳಿಯಿದ್ದಂತೆ. ಜಗತ್ಪಸಿದ್ಧ ಸಾಧನೆಗಳು ಒಬ್ಬನೇ ವಿಜ್ಞಾನಿಯದೆಂದು ಕಿರೀಟ ತೊಡಿಸುವಂತಿಲ್ಲ. ಆ ಸಂಶೋಧನೆಗೆ ಹಿಂದಿನ ವಿಜ್ಞಾನಿಗಳು ತಳಪಾಯ ಹಾಕಿರುತ್ತಾರೆ. ಅವರೆಲ್ಲ ಶೇಖರಿಸಿದ್ದ ಮಾಹಿತಿಯನ್ನು ಜರಡಿ ಹಿಡಿದು ಸಿದ್ಧಾಂತಗಳಲ್ಲಿನ ಅಸಮರ್ಪಕವನ್ನಳಿಸಿ ಸಮರ್ಪಕ ವನ್ನುಳಿಸಿ ತನ್ನದನ್ನೂ ಕಸಿ ಮಾಡಿ ಜಗತ್ತು ಬೆರಗಾಗುವಂಥ ವಿಶ್ವದ ರಹಸ್ಯಗಳನ್ನು ಮುಂದಿನವರು ಹೊರಗೆಡಹುತ್ತಾರೆ. ವಿಶ್ವವು ಭೂಕೇಂದ್ರಿತವೆಂಬ ಕಲ್ಪನೆಯನ್ನೊಡೆದು ಸೂರ್ಯಕೇಂದ್ರಿತವೆಂದು ಸಾಧಿಸಿದ ಕೀರ್ತಿಗೆ ಹಲವು ವಿಜ್ಞಾನಿಗಳ ಶ್ರಮವಿದೆ. ಒಬ್ಬರ ಹೆಗಲಮೇಲೆ ಇನ್ನೊಬ್ಬರು ಏರಿ ಕುಳಿತು ಆಯಾ ಶಾಖೆಯನ್ನು ಹೇಗೆ ಎತ್ತರೆತ್ತರಕ್ಕೆ ಒಯ್ದಿದ್ದಾರೆ ಎಂಬುದನ್ನು ನಿರೂಪಿಸಲಾಗಿದೆ. ಹೀಗೆ ಊಹಿಸಿದವರು. ಮಾಹಿತಿ ಕಲೆ ಹಾಕಿದವರು. ಅನುಸರಿಸಿ ಮುನ್ನಡೆದವರು ಎಲ್ಲರೂ ಯಶಸ್ಸಿನಲ್ಲಿ ಪಾಲುದಾರರೇ. ಅಂಥ ಸ್ಮರಣೀಯ ವಿಜ್ಞಾನಿಗಳ ಪರಿಚಯವನ್ನು, ಅವರ ಸಾಧನೆಗಳನ್ನು, ಆ ಮೂಲಕ ಭೌತವಿಜ್ಞಾನದ ಬೆಳವಣಿಗೆಯ ಹಾದಿಯನ್ನು ಇಲ್ಲಿ ದಾಖಲಿಸಿದ್ದಾರೆ ಡಾ॥ ಎ. ಓ. ಆವಲ ಮೂರ್ತಿ.

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2024
: Paperback
: 1/8 Demy Size
: 295
: 004750
: 250

ಭೌತವಿಜ್ಞಾನದ 145 ಶ್ರೇಷ್ಠ ವಿಜ್ಞಾನಿಗಳ ಸಿದ್ದಿ ಸಾಧನೆಗಳನ್ನು ಪರಿಚಯಿಸಿರುವ ಕೃತಿಯಿದು. ವಿಜ್ಞಾನ ಕ್ಷೇತ್ರದ ಆವಿಷ್ಕಾರಗಳು ಸರಪಳಿಯಿದ್ದಂತೆ. ಜಗತ್ಪಸಿದ್ಧ ಸಾಧನೆಗಳು ಒಬ್ಬನೇ ವಿಜ್ಞಾನಿಯದೆಂದು ಕಿರೀಟ ತೊಡಿಸುವಂತಿಲ್ಲ. ಆ ಸಂಶೋಧನೆಗೆ ಹಿಂದಿನ ವಿಜ್ಞಾನಿಗಳು ತಳಪಾಯ ಹಾಕಿರುತ್ತಾರೆ. ಅವರೆಲ್ಲ ಶೇಖರಿಸಿದ್ದ ಮಾಹಿತಿಯನ್ನು ಜರಡಿ ಹಿಡಿದು ಸಿದ್ಧಾಂತಗಳಲ್ಲಿನ ಅಸಮರ್ಪಕವನ್ನಳಿಸಿ ಸಮರ್ಪಕ ವನ್ನುಳಿಸಿ ತನ್ನದನ್ನೂ ಕಸಿ ಮಾಡಿ ಜಗತ್ತು ಬೆರಗಾಗುವಂಥ ವಿಶ್ವದ ರಹಸ್ಯಗಳನ್ನು ಮುಂದಿನವರು ಹೊರಗೆಡಹುತ್ತಾರೆ. ವಿಶ್ವವು ಭೂಕೇಂದ್ರಿತವೆಂಬ ಕಲ್ಪನೆಯನ್ನೊಡೆದು ಸೂರ್ಯಕೇಂದ್ರಿತವೆಂದು ಸಾಧಿಸಿದ ಕೀರ್ತಿಗೆ ಹಲವು ವಿಜ್ಞಾನಿಗಳ ಶ್ರಮವಿದೆ. ಒಬ್ಬರ ಹೆಗಲಮೇಲೆ ಇನ್ನೊಬ್ಬರು ಏರಿ ಕುಳಿತು ಆಯಾ ಶಾಖೆಯನ್ನು ಹೇಗೆ ಎತ್ತರೆತ್ತರಕ್ಕೆ ಒಯ್ದಿದ್ದಾರೆ ಎಂಬುದನ್ನು ನಿರೂಪಿಸಲಾಗಿದೆ. ಹೀಗೆ ಊಹಿಸಿದವರು. ಮಾಹಿತಿ ಕಲೆ ಹಾಕಿದವರು. ಅನುಸರಿಸಿ ಮುನ್ನಡೆದವರು ಎಲ್ಲರೂ ಯಶಸ್ಸಿನಲ್ಲಿ ಪಾಲುದಾರರೇ. ಅಂಥ ಸ್ಮರಣೀಯ ವಿಜ್ಞಾನಿಗಳ ಪರಿಚಯವನ್ನು, ಅವರ ಸಾಧನೆಗಳನ್ನು, ಆ ಮೂಲಕ ಭೌತವಿಜ್ಞಾನದ ಬೆಳವಣಿಗೆಯ ಹಾದಿಯನ್ನು ಇಲ್ಲಿ ದಾಖಲಿಸಿದ್ದಾರೆ ಡಾ॥ ಎ. ಓ. ಆವಲ ಮೂರ್ತಿ.

ಡಾ|| ಎ. ಓ. ಆವಲ ಮೂರ್ತಿ ಅವರು ಭೌತವಿಜ್ಞಾನದ ವಿಶ್ರಾಂತ ಪ್ರಾಧ್ಯಾಪಕರು. ಕಳೆದ ಕೆಲವು ವರ್ಷಗಳಿಂದ ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಏನು ಮಾಡಬೇಕು ಎಂಬುದನ್ನು ಕುರಿತು ಚಿಂತನೆ, ಅಧ್ಯಯನ, ಪ್ರಯೋಗಗಳು ಮತ್ತು ಬರವಣಿಗೆ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ಕುರಿತೇ ಸಂಶೋಧನ ಪ್ರಬಂಧವನ್ನು ಬರೆದು ಬೆಂಗಳೂರು, ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅಲ್ಲದೆ, ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆಯೂ ಆನೇಕ ಕೃತಿಗಳನ್ನು ರಚಿಸಿದ್ದಾರೆ. ಇವೆಲ್ಲದರ ಮುಂದುವರಿದ ಭಾಗವಾಗಿ, ಇಂದಿನ ಶಿಕ್ಷಣದಲ್ಲಿ ಇರುವ ಚಿಂತನಶೀಲತೆಯ ಕೊರತೆಯನ್ನು ಕಂಡುಕೊಂಡಿರುವ ಇವರು, ಮಕ್ಕಳಲ್ಲಿ ಚಿಂತನಶೀಲತೆಯನ್ನು ಮೈಗೂಡಿಸುವುದನ್ನೇ ಪ್ರಮುಖ ಉದ್ದೇಶವಾಗಿಟ್ಟುಕೊಂಡು, 'ಪುಟ್ಟ-ಕಿಟ್ಟ ಮಾಲಿಕೆ'ಯನ್ನು ರಚಿಸಿದ್ದಾರೆ

Books from ಆವಲ ಮೂರ್ತಿ ಎ ಓ, Avala Murthy A O

Author-Image
ಆವಲ ಮೂರ್ತಿ ಎ ಓ, Avala Murthy A O

About Author

Similar Books