ಡೂಡಲ್ : ಗೂಗಲ್ ಅಂಕಲ್ ಜೊತೆ 'ಮಾತು - ಕತೆ' | Doodle -Google Uncle Jote maatu - kate
MRP - ₹160.00 ₹144.00
ಡೂಡಲ್ : ಗೂಗಲ್ ಅಂಕಲ್ ಜೊತೆ 'ಮಾತು-ಕತೆ' ವಿದ್ವತ್ತು, ಪ್ರತಿಭೆ ಎರಡೂ ಇರುವ ಪ್ರೊಫೆಸರ್ ಹಾಗೂ ಅಗಾಧ ಜ್ಞಾನದ ಹಸಿವಿರುವ ಅವರ ಶಿಷ್ಯ - ಇವರಿಬ್ಬರ ಹರಟೆ ರೂಪದ ಮಾತುಕತೆಯೇ ಈ ಕೃತಿಯ ಹೂರಣ. ಎಷ್ಟೋ ಜನರಿಗೆ ಗೊತ್ತೇ ಇಲ್ಲದ ಅನೇಕ ವಿವರಗಳು ಓದುಗರಿಗೆ ಇಲ್ಲಿ ಲಭ್ಯವಾಗುತ್ತವೆ. ಸ್ವಾರಸ್ಯಕರವಾದ ಹಲವು ಸನ್ನಿವೇಶಗಳು, ಘಟನೆಗಳು ಈ ಕೃತಿಯಲ್ಲಿ ಮೂಡಿಬಂದಿವೆ. ಎಳೆಯರು ಮತ್ತು ಹಿರಿಯರ ನಡುವಿನ ಮಾತುಕತೆ ತುಂಬ ಮೌಲ್ಯಯುತವಾಗಿರುತ್ತದೆ. ಮಗುವಿಗೆ ಪ್ರಶ್ನಿಸಲು ಅವಕಾಶ ಮತ್ತು ಕುತೂಹಲ ಇರಬೇಕು. ಕುತೂಹಲ ತಣಿಸುವ ಪ್ರಾಜ್ಞರಿರಬೇಕು. ಆಗಲೇ ಇಂಥ ಕೃತಿಗಳ ಮೂಲಕ ಓದುಗರ ಜ್ಞಾನಭಂಡಾರ ಬೆಳೆದೀತು. ಇಂದಿರಾ ಕುಮಾರಿ 'ಕಲ್ಲುಗಳು ನೀರು ಕುಡಿಯುತ್ತವೆಯೇ? ಎವರೆಸ್ಟ್ ಪರ್ವತದ ಎತ್ತರ ಅಳೆಯುವುದಕ್ಕೂ ಟಿಪ್ಪು ಸುಲ್ತಾನನೊಡನೆ ನಡೆದ ಶ್ರೀರಂಗಪಟ್ಟಣದ ಯುದ್ದಕ್ಕೂ ಸಂಬಂಧವಿದೆಯೇ? ಈಸ್ಟರ್ ದ್ವೀಪದ ಪ್ರತಿಮೆಗಳಿಗೆ ಕೈಕಾಲುಗಳಿವೆಯೇ? ಟೆಲಿಸ್ಕೋಪ್ ಮಾಡಿ ಗ್ರಹತಾರೆಗಳನ್ನು ನೋಡಬಹುದೇ? ರೆಪೆಷಾಜ್ ಎಂದರೇನು? ರಾಬಿನ್ ಹುಡ್ ಇದ್ದನೇ? ಕಿಂದರಿ ಜೋಗಿ ಘಟನೆ ನಡೆದದ್ದು ನಿಜವೇ? ವೆಂಟ್ರಿಲಾಕ್ವಿಸಂ ನಾವೂ ಕಲಿಯಬಹುದೇ? ಭೂಗತ ನಗರಗಳ ಅನ್ವೇಷಣೆ ಕಲಿಕೆಗೆ ಸಹಕಾರಿಯೇ? ಹೀಗೆ ಹತ್ತು ಹಲವು ಕುತೂಹಲಕರ ಪ್ರಶ್ನೆಗಳ ಬೆನ್ನುಹತ್ತಿದ ಬಾಲಕಿಯೊಬ್ಬಳು ಹಿರಿಯ ಪ್ರೊಫೆಸರ್ ಜೊತೆ ಮಾತುಕತೆ ನಡೆಸುತ್ತಾ, ಸೂಕ್ತ ಉತ್ತರಗಳನ್ನು ಕಂಡುಕೊಳ್ಳುವ ಬೌದ್ಧಿಕ ಪಯಣವೇ ಈ 'ಡೂಡಲ್ - ಗೂಗಲ್ ಅಂಕಲ್ ಜೊತೆ ಮಾತು-ಕತೆ'. ಕುತೂಹಲಕರ ವಿಷಯಗಳನ್ನು ಮಾಹಿತಿ ಸಾಹಿತ್ಯ ರೂಪದಲ್ಲಿ ತಲುಪಿಸಿ, ಆಸಕ್ತಿ ಕೆರಳಿಸಿ, ಹೆಚ್ಚಿನ ಓದಿಗೆ ಪ್ರೇರೇಪಿಸುವ ಈ ಕೃತಿಯನ್ನು ಮಕ್ಕಳ ಕೈಗಳಲ್ಲಿಡುವ ಜವಾಬ್ದಾರಿ ನಮ್ಮದಲ್ಲವೇ? ಸಂತಸ ಕಲಿಕೆ ಸಾಕಾರವಾಗಲಿ!
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications

ಲೇಖಕ, ಚಿಂತಕ, ಅಂಕಣಕಾರರಾದ ಬೇದ್ರೆ ಮಂಜುನಾಥ್ ಮೂಲತಃ ಶಿವಮೊಗ್ಗದವರು, 10-06-1967ರಲ್ಲಿ ಕಡುಬಡತನದ ಕುಟುಂಬದಲ್ಲಿ ಹುಟ್ಟಿದ ಮಂಜುನಾಥ್ ಸದಾ ಕ್ರಿಯಾಶೀಲ ವ್ಯಕ್ತಿ. ತಮ್ಮ ಸ್ವ-ಪರಿಶ್ರಮದಿಂದಲೇ ಬೆಳೆದಿರುವ ಅವರು ಈ ವರೆಗೂ 50ಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನು ರಚಿಸಿದ್ದಾರೆ. ಸದ್ಯ ಆಕಾಶವಾಣಿ ಮೈಸೂರು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಜುನಾಥ್ ಅವರು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎ ಓದುವಾಗಲೇ ಇಂಗ್ಲೀಷ್ ಗ್ರಾಮರ್ ಬಗ್ಗೆ ಪುಸ್ತಕ ಪ್ರಕಟಿಸಿದ್ದರು. ಈ ಪುಸ್ತಕ 10 ಬಾರಿ ಮರು ಮುದ್ರಣಕಂಡು ದಾಖಲೆ ಸೃಷ್ಟಿಸಿತ್ತು. ಆನಂತರ ಕುವೆಂಪು ವಿವಿಯಲ್ಲಿ ಇತಿಹಾಸದಲ್ಲಿ ಪ್ರಥಮರಾಗಿ ಪದವಿ ಗಳಿಸಿದ್ದರು. ಇಂಗ್ಲೀಷಿನಲ್ಲಿ ಎಂ.ಎ.ಮಾಡಲು ಬಯಸಿದ್ದ ಅವರು ಮೈಸೂರಿಗೆ ತೆರಳಿದರು. ಎಂ.ಎ ಮುಗಿದ ನಂತರ ಡಿವಿಎಸ್ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವರು ಆ ನಂತರ ಆಲ್ ಇಂಡಿಯಾ ರೇಡಿಯೋದಲ್ಲಿ ಉದ್ಯೋಗಕ್ಕೆ ಸೇರಿದರು. 1991 ರಿಂದ ಚಿತ್ರದುರ್ಗದಲ್ಲಿ ಅವರ ಸೇವೆ ಮುಂದುವರೆಯಿತು. ಸದಾ ಕ್ರಿಯಾಶೀಲರಾಗಿರುವ ಮಂಜುನಾಥ್ ಯುವಜನರೊಟ್ಟಿಗೆ, ವಿದ್ಯಾರ್ಥಿಗಳೊಟ್ಟಿಗೆ ಹೆಚ್ಚಿನ ಕಾಲ ಕಳೆಯುತ್ತಾರೆ. ಕಂಪ್ಯೂಟರ್, ಕಥೆ ಹೇಳುವ ಸಮಯ, ಸರ್ವರಿಗು ಸಮಪಾಲು, ಸ್ಕೂಲ್ ಡೈರಿ, ಆಡಿ ಕಲಿಯೋಣ, ಇಂಗ್ಲಿಷ್ ಸಂವಹನ ಸೇರಿದಂತೆ ಐವತ್ತಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ.
Books from ಬೇದ್ರೆ ಮಂಜುನಾಥ, Bedre Manjunatha

ಬೇದ್ರೆ ಮಂಜುನಾಥ, Bedre Manjunatha
About Author