ಹಸೀನಾ | Hasina
MRP - ₹750.00 ₹675.00
ಬಾನು ಮುಷ್ತಾಕ್ ಅವರ ಕತೆಗಳಲ್ಲಿ ಮುಖ್ಯವಾಗಿ ಮೂರು ನೆಲೆಗಳಿವೆ .ವ್ಯವಸ್ಥೆ ಯೊಂದಿಗಿನ ಮುಖಾಮುಖಿ, ಬಡತನ ಮತ್ತು ಹೆಣ್ಣಿನ ಕೊನೆಯಿರದ ನೋವಿನ ಬದುಕು - ಇವು ಅವರ ಕತೆಗಳ ಪಧಾನ ವಸ್ತು ವಿಶೇಷಗಳು. ‘ನನ್ನ ಕೃತಿಗಳಲ್ಲಿ ಹೆಣ್ಣೇ ವಿರಾಜಮಾನಳಾಗಿದ್ದಾಳೆ ಎಂದು ಸ್ವತಃ ಲೇಖಕಿಯೇ ಘೋಷಿಸಿದ್ದರೂ ಅವರ ಕೃತಿಗಳಲ್ಲಿ ಹೆಣ್ಣಿನಪ್ಪೇ ಈ ಎರಡೂ ಅಂಶಗಳೂ ಪ್ರಧಾನವಾಗಿ ಕಾಣಿಸುತ್ತವೆ. ಈ ಮೂರರ ಅನನ್ಯ ನೇಯ್ಗೆಯೇ ಬಾನು ಅವರ ಕತೆಗಳ ಮೂಲ ವಿನ್ಯಾಸ ಎಂದು ನನಗನ್ನಿಸುತ್ತದೆ. ವ್ಯವಸ್ಥೆಯನ್ನು ಬಾನು ಮುಖಾಮುಖಿಯಾಗುವ ನಿಲುವೇ ನನಗೆ ತುಂಬಾ ವಿಶಿಷ್ಟವಾಗಿ ಕಾಣಿಸುತ್ತದೆ. ಬಾನು ಅವರ ಕತೆಗಳ ಮಹತ್ವವಿರುವುದೇ ಈ ಅಂಶದಲ್ಲಿ. ತನ್ನ ವಾರಿಗೆಯ ಲೇಖಕಿಯರಿಗಿ೦ತ ಇವರು ಭಿನ್ನರಾಗುವುದು ಈ ಕಾರಣಕ್ಕೆ. 'ವ್ಯವಸ್ಥೆಯನ್ನು ಬಾನು ಸ್ತ್ರೀವಾದಿ ಹಿನ್ನೆಲೆಯಲ್ಲಿ ಬದಲಾದ ಕಾಲ - ಸನ್ನಿವೇಶದ ' ಹಿನ್ನೆಲೆಯಲ್ಲಿ ಎನ್ನುವುದಕ್ಕಿಂತ ಹೆಚ್ಚಾಗಿ ಶುದ್ಧ ಮಾನವೀಯ ನೆಲೆಯಲ್ಲಿ ಮುಖಾಮುಖಿಯಾಗುತ್ತಾರೆ. ಅವರ ಈ ನಿಲುವಿನಿಂದಾಗಿ ಸ್ತೀವಾದಿ ದೃಷ್ಟಿಕೋನಕ್ಕಿರಬಹುದಾದ ಮಿತಿ ಮತ್ತು ಅಪಾಯಗಳನ್ನು ಅವರು ಶಕ್ತವಾಗಿ ದಾಟಿಬಿಟ್ಟಿದ್ದಾರೆ ಅವರ ಕತೆಗಳಿಗೆ ವಿಸ್ತಾರ ಒದಗಿ ಬರುವುದು ಮೂಲತಃ ಈ ಕಾರಣಕ್ಕೆ. ಅಪ್ಪಟ ಮಾನವೀಯ ನೆಲೆಯಲ್ಲಿ ಹೇಗೂ ಸಮರ್ಥಿಸಿಕೊಳ್ಳಲು ಅಸಾಧ್ಯವಾದ ವ್ಯವಸ್ಥೆಯ ಕ್ರೌರ್ಯದ ಅನಾವರಣ ಈ ಕಥಾ ಸ೦ಕಲನದ ಮುಖ್ಯ ಸಾಧನೆಗಳಲ್ಲಿ ಒಂದು. ಲೇಖಕಿಯರನ್ನೂ ವಿಸ್ತ್ರತ ಹಿನ್ನೆಲೆಯಲ್ಲಿಟ್ಟು ಚರ್ಚೆ ಮಾಡಬೇಕಾಗಿರುವುದು ನಮ್ಮ ಈ ಹೊತ್ತಿನ ಅಗತ್ಯ ವಸ್ತು ಅನಿವಾರ್ಯತೆ ಎನ್ನುವ ನನ್ನ ಮಾತಿಗೆ ಪೂರಕವಾದ, ಬಲವಾದ ಕಾರಣ ಇದು. ಡಾ.ಎಂ.ಎಸ್. ಆಶಾದೇವಿ "ಎದೆಯ ಹಣತೆ' ಸಂಕಲನದ ಮುನ್ನುಡಿಯಿಂದ
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications

Books from ಬಾನು ಮುಷ್ತಾಕ್ , Banu Mushtaq