Phone icon  CALL US NOW
080 - 22161900

  • ಹಿಂದುತ್ವದ ಹಿಂದೆ - ಮುಂದೆ | Hindutvada Hinde - Munde
ಹಿಂದುತ್ವದ ಹಿಂದೆ - ಮುಂದೆ | Hindutvada Hinde - Munde
10%

MRP - ₹85.00 ₹76.50

ಶಂಕರಾಚಾರ್ಯರಿಂದ ಹಿಡಿದು ಆಧುನಿಕ ಮಾರುಕಟ್ಟೆವರೆಗೆ ಖಚಿತವಾಗಿ ಬರೆಯಬಲ್ಲ ಜಿ.ರಾಮಕೃಷ್ಣ ನಮ್ಮ ನಡುವಣ ಬಹುದೊಡ್ಡ ಚಿಂತಕ ಎಂಬುದಕ್ಕೆ 'ಹಿಂದುತ್ವದ ಹಿಂದೆ-ಮುಂದೆ' ಹೆಸರಿನ ಪ್ರಸ್ತುತ ಪುಸ್ತಕವೇ ಸಾಕ್ಷಿ. ಈ ಪುಟ್ಟ ಪುಸ್ತಕದಲ್ಲಿ ಅವರು ವರ್ತಮಾನ ಕಾಲದ ಭಾರತದ ಗಂಭೀರ ಸಮಸ್ಯೆಗಳನ್ನು ಕರಾರುವಾಕ್ಕಾಗಿ ಹಿಡಿದಿಟ್ಟಿದ್ದಾರೆ, ಪುಸ್ತಕ ಚಿಕ್ಕದಾಗಿದ್ದರೂ ಇದು ಒಳಗೊಳ್ಳುವ ವಿಷಯಗಳು ಬೃಹತ್ತಾದುವು. ಜಗತ್ತು ವೇಗವಾಗಿ ಮುಂದಕ್ಕೆ ಚಲಿಸುತ್ತಿರುವಾಗ ತನ್ನದೇ ಪ್ರಜೆಗಳನ್ನು ಹಲವು ಶತಮಾನಗಳಷ್ಟು ಹಿಂದಕ್ಕೆ ಕೊಂಡೊಯ್ಯುವ ಬಿಜೆಪಿಯ ಕಾರ್ಯಸೂಚಿಗಳನ್ನು ಅವರು ಇಲ್ಲಿ ಗುರುತಿಸಿದ್ದಾರೆ. ನಾವ್ಯಾರೂ ಬದುಕಿರದ ಯಾವುದೋ ಒಂದು ಕಾಲಘಟ್ಟದ ಬಗ್ಗೆ ಅದಮ್ಯ ವ್ಯಾಮೋಹವನ್ನು ಪ್ರಕಟಪಡಿಸುವ 'ಹಿಂದುತ್ವ'ದ ರಾಜಕೀಯದ ಹುನ್ನಾರಗಳನ್ನು ಅವರು ದಿಟ್ಟವಾಗಿ ಬಯಲುಮಾಡಿದ್ದಾರೆ. ಬಿಜೆಪಿ ಮತ್ತು ಅದರ ಬೆನ್ನಿಗೆ ನಿಂತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತಾವೇ ಕಲ್ಪಿಸಿಕೊಂಡ ಇತಿಹಾಸ ಮತ್ತು ಕಾಲಾತೀತ ಪುರಾಣಗಳ ಬಲೆಯಲ್ಲಿ ಸಿಲುಕಿಕೊಂಡಿರುವುದರಿಂದ ಅದಕ್ಕೆ ಸಮಕಾಲೀನ ಸಮಾಜದಲ್ಲಿರುವ ಜಾತೀಯತೆ, ದಲಿತರ ಸಮಸ್ಯೆ, ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಸರ್ವಾಧಿಕಾರ ಮಹಿಳಾ ಶೋಷಣೆ, ಧಾರ್ಮಿಕ ಡಂಭಾಚಾರ, ಹೆಚ್ಚುತ್ತಿರುವ ಮತಾಂಧತೆ, ಇತ್ಯಾದಿಗಳೆಲ್ಲ ತಿಳಿಯದೇ ಹೋಗುತ್ತಿವೆ ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದ್ದಾರೆ. ಭಾರತೀಯ ಸಂವಿಧಾನವು ನಮ್ಮ ದೇಶದ ಪಾರಂಪರಿಕ ಅರಸೊತ್ತಿಗೆ ಧಾರ್ಮಿಕತೆ, ಬಾಹಣ್ಯ, ಜಾತೀಯತೆ ಮೊದಲಾದ ಹಂಗುಗಳಿಂದ ನಮ್ಮನ್ನು ಬಿಡಿಸಿ, ನಮಗೆ ದೇಶದ ಪೌರತ್ವವನ್ನು ಮೊದಲಬಾರಿಗೆ ಒದಗಿಸಿಕೊಟ್ಟಿದೆ, ಅನೇಕ ಹುಸಿ ಮಾತುಗಳಿಂದ ನಮ್ಮನ್ನು ಪಾರುಮಾಡಿ, ವಿಶ್ವಾಸಾರ್ಹವಾದ ಒಂದು ಆಶ್ವಾಸನೆಯನ್ನು ನೀಡಿದೆ ... ಸಮಾನತೆ ಮತ್ತು ಸಾಮಾಜಿಕ ನ್ಯಾಯಗಳು ಗಗನ ಕುಸುಮಗಳಾಗಿದ್ದ ಭಾರತದಲ್ಲಿ, ಎಲ್ಲರ ಘನತೆಯನ್ನು ಸಮಾನವಾಗಿ ಎತ್ತಿ ಹಿಡಿದದ್ದು ಸಂವಿಧಾನ. ಅದಕ್ಕೆ ಎಲ್ಲರನ್ನೂ ರಕ್ಷಿಸುವ ಹೊಣೆಗಾರಿಕೆಯಿದೆ, ಆದರೆ ಇವತ್ತು ನಮ್ಮ ಸಂವಿಧಾನವನ್ನು ಹುಚ್ಚಾಪಟ್ಟೆ ಉಲ್ಲಂಘಿಸಲಾಗುತ್ತಿದೆ. ಹೀಗಾಗಿ ಸಾಮೂಹಿಕ ಮಧ್ಯಪ್ರವೇಶವು ಇಂದಿನ ಅಗತ್ಯ. - ಪುರುಷೋತ್ತಮ ಬಿಳಿಮಲೆ (ಮುನ್ನುಡಿಯಿಂದ)

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2023
: Paperback
: 1/8 Demy Size
: 88
: 004426
: .350

ಶಂಕರಾಚಾರ್ಯರಿಂದ ಹಿಡಿದು ಆಧುನಿಕ ಮಾರುಕಟ್ಟೆವರೆಗೆ ಖಚಿತವಾಗಿ ಬರೆಯಬಲ್ಲ ಜಿ.ರಾಮಕೃಷ್ಣ ನಮ್ಮ ನಡುವಣ ಬಹುದೊಡ್ಡ ಚಿಂತಕ ಎಂಬುದಕ್ಕೆ 'ಹಿಂದುತ್ವದ ಹಿಂದೆ-ಮುಂದೆ' ಹೆಸರಿನ ಪ್ರಸ್ತುತ ಪುಸ್ತಕವೇ ಸಾಕ್ಷಿ. ಈ ಪುಟ್ಟ ಪುಸ್ತಕದಲ್ಲಿ ಅವರು ವರ್ತಮಾನ ಕಾಲದ ಭಾರತದ ಗಂಭೀರ ಸಮಸ್ಯೆಗಳನ್ನು ಕರಾರುವಾಕ್ಕಾಗಿ ಹಿಡಿದಿಟ್ಟಿದ್ದಾರೆ, ಪುಸ್ತಕ ಚಿಕ್ಕದಾಗಿದ್ದರೂ ಇದು ಒಳಗೊಳ್ಳುವ ವಿಷಯಗಳು ಬೃಹತ್ತಾದುವು. ಜಗತ್ತು ವೇಗವಾಗಿ ಮುಂದಕ್ಕೆ ಚಲಿಸುತ್ತಿರುವಾಗ ತನ್ನದೇ ಪ್ರಜೆಗಳನ್ನು ಹಲವು ಶತಮಾನಗಳಷ್ಟು ಹಿಂದಕ್ಕೆ ಕೊಂಡೊಯ್ಯುವ ಬಿಜೆಪಿಯ ಕಾರ್ಯಸೂಚಿಗಳನ್ನು ಅವರು ಇಲ್ಲಿ ಗುರುತಿಸಿದ್ದಾರೆ. ನಾವ್ಯಾರೂ ಬದುಕಿರದ ಯಾವುದೋ ಒಂದು ಕಾಲಘಟ್ಟದ ಬಗ್ಗೆ ಅದಮ್ಯ ವ್ಯಾಮೋಹವನ್ನು ಪ್ರಕಟಪಡಿಸುವ 'ಹಿಂದುತ್ವ'ದ ರಾಜಕೀಯದ ಹುನ್ನಾರಗಳನ್ನು ಅವರು ದಿಟ್ಟವಾಗಿ ಬಯಲುಮಾಡಿದ್ದಾರೆ. ಬಿಜೆಪಿ ಮತ್ತು ಅದರ ಬೆನ್ನಿಗೆ ನಿಂತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ತಾವೇ ಕಲ್ಪಿಸಿಕೊಂಡ ಇತಿಹಾಸ ಮತ್ತು ಕಾಲಾತೀತ ಪುರಾಣಗಳ ಬಲೆಯಲ್ಲಿ ಸಿಲುಕಿಕೊಂಡಿರುವುದರಿಂದ ಅದಕ್ಕೆ ಸಮಕಾಲೀನ ಸಮಾಜದಲ್ಲಿರುವ ಜಾತೀಯತೆ, ದಲಿತರ ಸಮಸ್ಯೆ, ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಸರ್ವಾಧಿಕಾರ ಮಹಿಳಾ ಶೋಷಣೆ, ಧಾರ್ಮಿಕ ಡಂಭಾಚಾರ, ಹೆಚ್ಚುತ್ತಿರುವ ಮತಾಂಧತೆ, ಇತ್ಯಾದಿಗಳೆಲ್ಲ ತಿಳಿಯದೇ ಹೋಗುತ್ತಿವೆ ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದ್ದಾರೆ. ಭಾರತೀಯ ಸಂವಿಧಾನವು ನಮ್ಮ ದೇಶದ ಪಾರಂಪರಿಕ ಅರಸೊತ್ತಿಗೆ ಧಾರ್ಮಿಕತೆ, ಬಾಹಣ್ಯ, ಜಾತೀಯತೆ ಮೊದಲಾದ ಹಂಗುಗಳಿಂದ ನಮ್ಮನ್ನು ಬಿಡಿಸಿ, ನಮಗೆ ದೇಶದ ಪೌರತ್ವವನ್ನು ಮೊದಲಬಾರಿಗೆ ಒದಗಿಸಿಕೊಟ್ಟಿದೆ, ಅನೇಕ ಹುಸಿ ಮಾತುಗಳಿಂದ ನಮ್ಮನ್ನು ಪಾರುಮಾಡಿ, ವಿಶ್ವಾಸಾರ್ಹವಾದ ಒಂದು ಆಶ್ವಾಸನೆಯನ್ನು ನೀಡಿದೆ ... ಸಮಾನತೆ ಮತ್ತು ಸಾಮಾಜಿಕ ನ್ಯಾಯಗಳು ಗಗನ ಕುಸುಮಗಳಾಗಿದ್ದ ಭಾರತದಲ್ಲಿ, ಎಲ್ಲರ ಘನತೆಯನ್ನು ಸಮಾನವಾಗಿ ಎತ್ತಿ ಹಿಡಿದದ್ದು ಸಂವಿಧಾನ. ಅದಕ್ಕೆ ಎಲ್ಲರನ್ನೂ ರಕ್ಷಿಸುವ ಹೊಣೆಗಾರಿಕೆಯಿದೆ, ಆದರೆ ಇವತ್ತು ನಮ್ಮ ಸಂವಿಧಾನವನ್ನು ಹುಚ್ಚಾಪಟ್ಟೆ ಉಲ್ಲಂಘಿಸಲಾಗುತ್ತಿದೆ. ಹೀಗಾಗಿ ಸಾಮೂಹಿಕ ಮಧ್ಯಪ್ರವೇಶವು ಇಂದಿನ ಅಗತ್ಯ. - ಪುರುಷೋತ್ತಮ ಬಿಳಿಮಲೆ (ಮುನ್ನುಡಿಯಿಂದ)

Books from ರಾಮಕೃಷ್ಣ ಜಿ, Ramakrishna G

Author-Image
ರಾಮಕೃಷ್ಣ ಜಿ, Ramakrishna G

Similar Books