Phone icon  CALL US NOW
080 - 22161900

  • ಖಗೋಳ ದರ್ಶನ  | Khagola Darshana
ಖಗೋಳ ದರ್ಶನ  | Khagola Darshana
15%

ಖಗೋಳ ದರ್ಶನ  | Khagola Darshana

ಖಗೋಳ ದರ್ಶನ | Khagola Darshana

MRP - ₹1950.00 ₹1657.50

ಎಂದೆಂದಿಗೂ ತನ್ನ ಆಕರ್ಷಣೆಯನ್ನು ಬಿಟ್ಟುಕೊಡದ ನಕ್ಷತ್ರಲೋಕವು ಕೌತುಕಗಳ ಆಗರ. ಅದನ್ನು ತಿಳಿಯುವ ಉತ್ಸುಕತೆ ಪ್ರತಿಯೊಬ್ಬರಲ್ಲೂ ಪುಟಿಯುತ್ತದೆ. ಸುಲಭವಾಗಿ ತಿಳಿಯುವ ಹಗಲು ಬೆಳಕಿನ ಆಟದಿಂದ ಅದು ನಮ್ಮನ್ನು ಭೌತವಿಜ್ಞಾನದ ಆಳಕ್ಕೆ ಸೆಳೆದೊಯ್ಯುತ್ತದೆ. ಹೊಸ ಉಪಕರಣಗಳು, ಕಂಪ್ಯೂಟರ್‌ಗಳು ಒದಗಿಸುವ ಸಂಕೀರ್ಣ ಫಲಿತಾಂಶಗಳು ಸಾಮಾನ್ಯರನ್ನು ತಲುಪುವುದೇ ಕಷ್ಟವಾಗಿದೆ. ಆರಂಭಿಕ ಮೂಲ ತತ್ವಗಳಿಂದ ಅತಿ ಕ್ಲಿಷ್ಟ ಸಿದ್ಧಾಂತಗಳನ್ನು ಪರಿಚಯಿಸುವ ಪ್ರಯತ್ನವಾಗಿ ತಯಾರಾಗಿರುವ ಈ ಸಂಪುಟ ಆಕರ ಗ್ರಂಥವಾಗಿ ಹೊರಬರುತ್ತಿದೆ. ಪ್ರೊಫೆಸರ್ ಸಿ. ವಿ. ವಿಶ್ವೇಶ್ವರ ಮತ್ತು ಪ್ರೊಫೆಸರ್ ಜಯಂತ್ ನಾರ್ಳೀಕರ್ ಅವರಂತಹ ಶ್ರೇಷ್ಠ ವಿಜ್ಞಾನಿಗಳು ಮತ್ತು ನಮ್ಮ ನಡುವೆಯೇ ಇರುವ ಸಂಶೋಧನಾ ನಿರತ ವಿಜ್ಞಾನಿಗಳೇ ಲೇಖನಗಳನ್ನು ರಚಿಸಿಕೊಟ್ಟಿರುವುದರಿಂದ ಅವರುಗಳ ನಿಖರವಾದ ಶೈಲಿಯ ಪರಿಚಯ ಕನ್ನಡಿಗರಿಗೆ ದೊರಕುತ್ತಿದೆ. ನಮ್ಮ ಭೂಮಿ, ಚಂದ್ರ ಸೌರಮಂಡಲಗಳನ್ನು ದಾಟಿ ನಕ್ಷತ್ರಗಳನ್ನು, ಮುಂದೆ ನಮ್ಮ ಗ್ಯಾಲಕ್ಸಿ ಆಕಾಶಗಂಗೆಯನ್ನು, ತನ್ಮೂಲಕ ಇತರ ಗ್ಯಾಲಕ್ಸಿಗಳ ಬೃಹತ್ ವಿಸ್ತಾರವನ್ನು ಪರಿಚಯಿಸುತ್ತದೆ. ವಿಶ್ವ ಎಂಬುದರ ಅಗಾಧ ಕಲ್ಪನೆಯನ್ನು ಮತ್ತು ಅದಕ್ಕೆ ಪೂರಕವಾಗಿ ಸಿದ್ಧಾಂತಗಳನ್ನೂ ಪ್ರಾಯೋಗಿಕವಾಗಿ ನಾವೆದುರಿಸುವ ತಿಳಿಸಿಕೊಡುವ ಸವಾಲುಗಳೂ ಸಂಭ್ರಮದಲ್ಲಿ ಮುಖ್ಯವಾಗುತ್ತವೆ. ಹಾಗಾಗಿಯೇ, ಮತ್ತೆ ಮತ್ತೆ ಹತ್ತಲೇಬೇಕಾದ ಪ್ರಯತ್ನಗಳಿಗೆ ಅತಿ ಅಗತ್ಯವಾದ ಹಂತ ಹಂತದ ಮೆಟ್ಟಿಲು ಈ ಸಂಪುಟ.
Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2023
: Hardbound
: 1/4 Demy Size
: 472
: B-004514
: 1.73 Kg

ಎಂದೆಂದಿಗೂ ತನ್ನ ಆಕರ್ಷಣೆಯನ್ನು ಬಿಟ್ಟುಕೊಡದ ನಕ್ಷತ್ರಲೋಕವು ಕೌತುಕಗಳ ಆಗರ. ಅದನ್ನು ತಿಳಿಯುವ ಉತ್ಸುಕತೆ ಪ್ರತಿಯೊಬ್ಬರಲ್ಲೂ ಪುಟಿಯುತ್ತದೆ. ಸುಲಭವಾಗಿ ತಿಳಿಯುವ ಹಗಲು ಬೆಳಕಿನ ಆಟದಿಂದ ಅದು ನಮ್ಮನ್ನು ಭೌತವಿಜ್ಞಾನದ ಆಳಕ್ಕೆ ಸೆಳೆದೊಯ್ಯುತ್ತದೆ. ಹೊಸ ಉಪಕರಣಗಳು, ಕಂಪ್ಯೂಟರ್‌ಗಳು ಒದಗಿಸುವ ಸಂಕೀರ್ಣ ಫಲಿತಾಂಶಗಳು ಸಾಮಾನ್ಯರನ್ನು ತಲುಪುವುದೇ ಕಷ್ಟವಾಗಿದೆ. ಆರಂಭಿಕ ಮೂಲ ತತ್ವಗಳಿಂದ ಅತಿ ಕ್ಲಿಷ್ಟ ಸಿದ್ಧಾಂತಗಳನ್ನು ಪರಿಚಯಿಸುವ ಪ್ರಯತ್ನವಾಗಿ ತಯಾರಾಗಿರುವ ಈ ಸಂಪುಟ ಆಕರ ಗ್ರಂಥವಾಗಿ ಹೊರಬರುತ್ತಿದೆ. ಪ್ರೊಫೆಸರ್ ಸಿ. ವಿ. ವಿಶ್ವೇಶ್ವರ ಮತ್ತು ಪ್ರೊಫೆಸರ್ ಜಯಂತ್ ನಾರ್ಳೀಕರ್ ಅವರಂತಹ ಶ್ರೇಷ್ಠ ವಿಜ್ಞಾನಿಗಳು ಮತ್ತು ನಮ್ಮ ನಡುವೆಯೇ ಇರುವ ಸಂಶೋಧನಾ ನಿರತ ವಿಜ್ಞಾನಿಗಳೇ ಲೇಖನಗಳನ್ನು ರಚಿಸಿಕೊಟ್ಟಿರುವುದರಿಂದ ಅವರುಗಳ ನಿಖರವಾದ ಶೈಲಿಯ ಪರಿಚಯ ಕನ್ನಡಿಗರಿಗೆ ದೊರಕುತ್ತಿದೆ. ನಮ್ಮ ಭೂಮಿ, ಚಂದ್ರ ಸೌರಮಂಡಲಗಳನ್ನು ದಾಟಿ ನಕ್ಷತ್ರಗಳನ್ನು, ಮುಂದೆ ನಮ್ಮ ಗ್ಯಾಲಕ್ಸಿ ಆಕಾಶಗಂಗೆಯನ್ನು, ತನ್ಮೂಲಕ ಇತರ ಗ್ಯಾಲಕ್ಸಿಗಳ ಬೃಹತ್ ವಿಸ್ತಾರವನ್ನು ಪರಿಚಯಿಸುತ್ತದೆ. ವಿಶ್ವ ಎಂಬುದರ ಅಗಾಧ ಕಲ್ಪನೆಯನ್ನು ಮತ್ತು ಅದಕ್ಕೆ ಪೂರಕವಾಗಿ ಸಿದ್ಧಾಂತಗಳನ್ನೂ ಪ್ರಾಯೋಗಿಕವಾಗಿ ನಾವೆದುರಿಸುವ ತಿಳಿಸಿಕೊಡುವ ಸವಾಲುಗಳೂ ಸಂಭ್ರಮದಲ್ಲಿ ಮುಖ್ಯವಾಗುತ್ತವೆ. ಹಾಗಾಗಿಯೇ, ಮತ್ತೆ ಮತ್ತೆ ಹತ್ತಲೇಬೇಕಾದ ಪ್ರಯತ್ನಗಳಿಗೆ ಅತಿ ಅಗತ್ಯವಾದ ಹಂತ ಹಂತದ ಮೆಟ್ಟಿಲು ಈ ಸಂಪುಟ.

ಶೈಲಜಾ ಬಿ.ಎಸ್. ಜವಹರಲಾಲ್ ನೆಹರೂ ತಾರಾಲಯದ ಶೈಕ್ಷಣಿಕ ಕಾರ್ಯಕ್ರಮಗಳ ನಿರ್ವಾಹಕರು. ತಂದೆ : ಬ.ನ. ಸುಂದರರಾವ್, ತಾಯಿ- ರತ್ತಮ ಸುಂದರರಾವ್. ಶುಕ್ರಗ್ರಹದ ಸಂಕ್ರಮಣ, ನನ್ನ ಮಿತ್ರ ಸೋರಣ್ಣ (ಜೆ.ಬಿ.ಎಸ್. ಹಾಲ್ಲೆನರ ಮಿ. ಲೀಕಿಯ ಅನುವಾದ), ಬಾನಿಗೊಂದು ಕೈಪಿಡಿ ಕೃತಿಯ ಸಂಪಾದನೆ ನವಕರ್ನಾಟಕ ಜ್ಞಾನವಿಜ್ಞಾನ ಕೋಶದಲ್ಲಿ ಖಗೋಳ ವಿಜ್ಞಾನ ಭಾಗದ ರಚನೆ, ಸಫಾರಿ ಎಂಬ ಲಕ್ಷುರಿ (ಪ್ರವಾಸ ಕಥನ) (2007), ದೂರದರ್ಶಕ, ಗ್ರಹಣ, ಸೂರ್ಯ, ಸೌರವ್ಯೂಹ, ಅಗಸದ ಅಲೆಮಾರಿಗಳು (ವಿಜ್ಞಾನ ಸಾಹಿತ್ಯ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಶುಕ್ರಗ್ರಹದ ಸಂಕ್ರಮಣಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಎಚ್.ಎನ್. ದತ್ತಿನಿಧಿ ಬಹುಮಾನ, ಆರ್ಯಭಟ ಪ್ರಶಸ್ತಿ, ಇವರಿಗೆ ಲಭಿಸಿದೆ. ತಾರಾಲಯ ಕಾರ್ಯಕ್ರಮಗಳು, ಆಕಾಶವಾಣಿ ಹಾಗೂ ದೂರದರ್ಶನಗಳಿಗೆ ಬರಹಗಳು, ಅಸ್ಟೆರಾಯಿಡ್, ಧೂಮಕೇತು ಹಾಗೂ ತಾರಾಪುಂಜಗಳ ಬಗ್ಗೆ ಸಂಶೋಧನೆ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಮಾವೇಶಗಳ ಸಂಯೋಜನೆ ಹಾಗೂ ಭಾಗವಹಿಸುವಿಕೆ, ಖಗೋಳ ವಿಜ್ಞಾನ ಸಂಬಂಧಿ ಕಾರ್ಯಕ್ರಮಗಳು, ಪ್ರತಿರೂಪಗಳ ರಚನೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಸಲಹಾಕಾರರು, ಪಠ್ಯಪುಸ್ತಕ ರಚನಾ ಸಮಿತಿ, ಅಧ್ಯಯನ ಮಂಡಳಿ, ಒಲಂಪಿಯಾಡ್ ಸಂಯೋಜನಾ ಸಮಿತಿಗಳ ಸದಸ್ಯರು, ಬೃಹತ್ ತಾರೆಗಳು, ಅಸ್ಫೋಟಕ ತಾರೆಗಳು ಹಾಗೂ ವಿಚಿತ್ರ ತಾರೆಗಳ ಬಗ್ಗೆ ಸಂಶೋಧನೆ, ಖಗೋಳ ವಿಜ್ಞಾನದ ಇತಿಹಾಸ ಕುರಿತು ವಿಶೇಷ ಅಧ್ಯಯನ ನಡೆಸಿದ್ದಾರೆ.

Books from ಶೈಲಜಾ ಬಿ ಎಸ್, Shylaja B S

Author-Image
ಶೈಲಜಾ ಬಿ ಎಸ್, Shylaja B S

About Author

Similar Books