Phone icon  CALL US NOW
080 - 22161900

  • ನಡು ಬಗ್ಗಿಸದ ಎದೆಯ ದನಿ | Nadu Baggisada Edeya Dani
ನಡು ಬಗ್ಗಿಸದ ಎದೆಯ ದನಿ | Nadu Baggisada Edeya Dani
10%

MRP - ₹200.00 ₹180.00

"ನಡು ಬಗ್ಗಿಸದ ಎದೆಯ ದನಿ" ದತ್ತ ಪಾದುಕೆಯ ಬೆನ್ನ ಬಿದ್ದು, 1997 ರಲ್ಲಿ ನಾನು ಭಜರಂಗದಳದ ಜಿಲ್ಲಾ ಸಂಚಾಲಕನಾದೆ. ಚಿಕ್ಕಮಗಳೂರು ಜಿಲ್ಲಾ ಸಂಚಾಲಕನಾಗಿದ್ದ ಸುನೀಲ್ ಕುಮಾರ್ ರಾಜ್ಯ ಸಂಚಾಲಕರಾಗಿ ನೇಮಕಗೊಂಡರು. ಆಗ ನಮ್ಮ ಕೈಯ್ಯಲ್ಲಿ ಚಿಲ್ಲರೆ ಹಣ ಓಡಾಡುತ್ತಿತ್ತು. ದತ್ತಾತ್ರೆಯನ ಹೆಸರಲ್ಲಿ ಹಣ ಸಂಗ್ರಹ ಮಾಡುತ್ತಿದ್ದೆವು. ನಾನು ಜಿಲ್ಲಾ ಸಂಚಾಲಕನಾಗುತ್ತಿದ್ದಂತೆ ಪೂರ್ತಿ ಹುಮ್ಮಸ್ಸಿನಿಂದ ಕೆಲಸ ಮಾಡಲಾರಂಬಿಸಿದೆ. ರಾತ್ರಿ ಹಗಲು ಭಜರಂಗದಳದ ಧ್ಯಾನವೊಂದು ಬಿಟ್ಟು ಇನ್ನೇನೂ ಇರಲಿಲ್ಲ. ಬೈಠಕ್‌ಗಳ ಮೇಲೆ ಬೈಠಕ್ ನಡೆಸಲಾರಂಬಿಸಿದೆ. ಸೊನ್ನೆ ಸಂಖ್ಯೆಯ ಸದಸ್ಯರನ್ನು ಹೊಂದಿದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಜರಂಗದಳವನ್ನು ಬಲಿಷ್ಠವಾಗಿ ಕಟ್ಟಿ ಬೆಳೆಸಿದೆ. ಚಿಕ್ಕಮಗಳೂರಿನ ಯಾವ ತಾಲೂಕಿನ ಯಾವ ಹಳ್ಳಿಯನ್ನೂ ನಾನು ಬಿಡಲಿಲ್ಲ. ಗಲ್ಲಿ ಗಲ್ಲಿ, ಮನೆ ಮನೆ ತಿರುಗಿ ದತ್ತಾತ್ರೆಯನ ಹೆಸರಲ್ಲಿ ಭಜರಂಗದಳವನ್ನು ಕಟ್ಟಿದೆವು. ಅದೊಂದು ಬೈಠಕ್‌ನಲ್ಲಿ ಮತ್ತೆ ರಥಯಾತ್ರೆ ಮಾಡುವ ನಿರ್ಧಾರ ತೆಗೆದುಕೊಂಡೆವು. 'ದತ್ತಪೀಠದಲ್ಲಿ ದತ್ತನ ಪಾದುಕೆಗಳು ಇವೆಯಂತೆ. ಅದನ್ನು ತಂದು ರಥದ ಶೋಭಾಯಾತ್ರೆಯಲ್ಲಿ ಇಡಬೇಕು. ಹಾಗೆ ದತ್ತನ ಪಾದುಕೆಗಳ ಶೋಭಾಯಾತ್ರೆ ನಡೆಸಿದರೆ ಜನರಿಂದ ಅಭೂತಪೂರ್ವ ಬೆಂಬಲ ಸಿಗುತ್ತದೆ. ಭಾವನಾತ್ಮಕವಾಗಿಯೂ ರಥಯಾತ್ರೆ ಜನರಿಗೆ ನಾಟುತ್ತದೆ' ಎಂಬ ಅಭಿಪ್ರಾಯ ಬೈಠಕ್‌ನಲ್ಲಿ ವ್ಯಕ್ತವಾಯಿತು. ನಿಜ ಹೇಳಬೇಕೆಂದರೆ ನಾನೂ ದತ್ತಪೀಠವನ್ನು ಸರಿಯಾಗಿ ನೋಡಿರಲಿಲ್ಲ. ಅದಾಗಲೇ ದತ್ತಪೀಠಕ್ಕಾಗಿ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ದತ್ತಪೀಠದಲ್ಲಿ ಪಾದುಕೆಗಳು ಇದೆಯೋ ಇಲ್ಲವೋ ಎಂಬುದು ನಮಗೆ ಗೊತ್ತಿರಲಿಲ್ಲ. ನಾನು, ಮೋಹನ್ ಮನಸೋಳಿ, ಬೋಜರಾಜ್ ಅದೊಂದು ದಿನ ದತ್ತಪೀಠದ ಪಾದುಕೆಗಳನ್ನು ನೋಡಿಕೊಂಡು ಬರಲು ಹೊರಟೆವು. ದತ್ತಪೀಠದ ಒಳಭಾಗದಲ್ಲಿ ಒಂದು ನಂದಾದೀಪ, ಹೊರಭಾಗದಲ್ಲಿ ಒಂದು ತುಳಸೀಕಟ್ಟೆ ಹೊರತುಪಡಿಸಿದರೆ ದತ್ತಪೀಠ ಹಿಂದೂಗಳದ್ದು ಎನ್ನುವುದಕ್ಕೆ ಯಾವ ಪುರಾವೆಯೂ ಅಲ್ಲಿ ಸಿಗಲಿಲ್ಲ. ದತ್ತಾತ್ರೆಯನ ಪಾದುಕೆಗಳು ಬಿಡಿ, ದತ್ತಾತ್ರೆಯ ಇಲ್ಲಿ ತಪ್ಪಸ್ಸು ಮಾಡಿದ್ದರು ಎಂಬುದಕ್ಕೆ ಸಣ್ಣ ಕುರುಹುಗಳೂ ಇರಲಿಲ್ಲ. ಎಲ್ಲಿ ನೋಡಿದರೂ ಹಸಿರು ಚಾದರ, ಗೋರಿಗಳಷ್ಟೇ ಕಾಣುತ್ತಿದ್ದವು. ನಾವು ದತ್ತಪೀಠದಿಂದ ಮರಳಿ ಬಂದವರೇ ಇನ್ನೊಂದು ಬೈಠಕ್ ಸೇರಿದೆವು. ದತ್ತಪೀಠವನ್ನು ನಮ್ಮದಾಗಿಸಿಕೊಳ್ಳಲು ನಾವು ಶೂನ್ಯದಿಂದ ಕೆಲಸ ಮಾಡಬೇಕು. ದತ್ತನ ಪಾದಕೆಗಳನ್ನು ಜನರ ಮುಂದೆ ಇಡಬೇಕು. ಆದರೆ ದತ್ತಪೀಠದಲ್ಲಿ ದತ್ತನ ಪಾದುಕೆಗಳು ಇಲ್ಲ. ತರೀಕೆರೆಯ ಭಜರಂಗದಳದ ಮಂಡಲವು ಅದಕ್ಕೆ ಉಪಾಯ ಸೂಚಿಸಿತು. ತರಿಕೆರೆಯ ಬಡಗಿಯಿಂದ ದತ್ತನ ಮರದ ಪಾದುಕೆಯನ್ನು ಮಾಡಿಸುವುದು ಎಂಬ ಸಲಹೆ ನೀಡಿತು. ತರೀಕೆರೆಯ ಕಾರ್ಪೆಂಟರ್ ಮೂರ್ತಿ ಎಂಬವರು ಸುಂದರವಾದ ಆದರೆ ಹಳೆಯ ರೀತಿ ಕಾಣುವ ಪಾದುಕೆಯನ್ನು ಮಾಡಿಕೊಟ್ಟರು. ಆ ಪಾದುಕೆಗೆ ಬೆಳ್ಳಿಯ ಕವಚವನ್ನೂ ಹಾಕುವಂತೆ ಅದೇ ಕಾರ್ಪೆಂಟರಿಗೆ ಸೂಚಿಸಿದೆವು. 'ಬೆಳ್ಳಿಯ ಕವಚ ಎಂದರೆ ಸ್ವಲ್ಪ ಜಾಸ್ತಿ ಖರ್ಚಾಗುತ್ತದೆ' ಎಂದು ಕಾರ್ಪೆಂಟರ್ ಮೂರ್ತಿ ಹೇಳಿದರು. ಖರ್ಚು ಎಷ್ಟಾದರೂ ಆಗಲಿ, ಕೊಡುತ್ತೇವೆ ಎಂದೆವು. ಕೆಲ ದಿನಗಳಲ್ಲಿ ದತ್ತಾತ್ರೆಯ ಬೆಳ್ಳಿ ಲೇಪಿತ ಮರದ ಪಾದುಕೆ ಸಿದ್ಧವಾಯ್ತು. ನಮ್ಮ ರಥದಲ್ಲಿ ಸರ್ವ ರೀತಿಯ ಅಲಂಕಾರಗಳನ್ನು ಮಾಡಿ ದತ್ತ ಪಾದುಕೆಯನ್ನು ಮುಂದೆ ಇರಿಸಲಾಯಿತು. ದತ್ತನ ಪಾದುಕೆಗಳನ್ನು ನೋಡಲು ಜನ ಮುಗಿ ಬಿದ್ದರು. ಅಂದು ದತ್ತಾತ್ರೆಯರು ನಡೆದಾಡಿದ ಪಾನುವನ್ನು ಎಂದು ಜನ ಭಾವುಕರಾದರು. 'ಭಜರಂಗದಳಕ್ಕೆ ದೇಣಿಗೆಯ ಮಹಾಪೂರ ಹರಿದು ಬಂತು, ಅದಕ್ಕಿಂತಲೂ ಮುಖ್ಯವಾಗಿ ಈಗ ದತ್ತನ ರಥಯಾತ್ರೆಯನ್ನು ತಡೆಯುವ ಧೈರ್ಯ ಯಾರಿಗೂ ಇರಲಿಲ್ಲ. ಖಾಲಿ ನಾಲ್ಕು ರಥ ಹೊರಟಿದ್ದಾಗ ಸಾಣೇಹಳ್ಳಿ ಶ್ರೀಗಳು ರಥವನ್ನು ತಡೆದಿದ್ದರು. ಪೊಲೀಸರು, ಜಿಲ್ಲಾಡಳಿತ ಕೂಡಾ ರಥವನ್ನು ತಡೆದಿದ್ದರು. ಆದರೆ ಈಗ ದತ್ತನ ಪಾದುಕೆ ಹೊತ್ತಿರುವ ರಥವನ್ನು ತಡೆಯಲು ಯಾರಿಗೂ ತಾಕತ್ತು ಇಲ್ಲ. ಒಂದು ವೇಳೆ ದತ್ತ ಪಾದುಕೆ ಹೊತ್ತಿದ್ದ ಈ ಯಾತ್ರೆಯನ್ನು ತಡೆದರೆ ಹಿಂದೂ ಸಮಾಜ ರೊಚ್ಚಿಗೇಳುವ ಸಾಧ್ಯತೆ ಇತ್ತು. ನಾವು ಆರು ಜನರಿಗೆ ಹೊರತುಪಡಿಸಿ ಉಳಿದವರ್ಯಾರಿಗೂ ದತ್ತಪಾದುಕೆಯ ರಹಸ್ಯ ತಿಳಿದಿಲ್ಲ. ಇಡೀ ಹಿಂದೂ ಸಮುದಾಯ ಅದು ದತ್ತಾತ್ರೆಯರೇ ಬಳಸಿದ ಪಾದುಕೆ ಎಂದು ತಿಳಿದಿತ್ತು. ಈಗ ನಾವು ಗಟ್ಟಿಯಾಗಿದ್ದೆವು. ಜನಬಲ, ಹಣ ಬಲ ಎಲ್ಲವೂ ನಮ್ಮ ಜೊತೆಗಿತ್ತು. ಸರ್ಕಾರ ಮತ್ತು ಜಿಲ್ಲಾಡಳಿತ ನಮ್ಮ ಜೊತೆ ಇರಲಿಲ್ಲ. ಅವರು ನಾಲ್ಕು ಕೇಸು ಹಾಕಿ ಜೈಲಿಗೆ ಹಾಕುವುದು ಬಿಟ್ಟರೆ ಇನ್ನೇನೂ ಮಾಡಲು ಆಗುತ್ತಿರಲಿಲ್ಲ. ನಾನು ದತ್ತಾತ್ರೆಯನ ಹೆಸರಲ್ಲಿ ಸಂಗ್ರಹವಾದ ಹಣದ ಚಿಕ್ಕಾಸು ಮುಟ್ಟುತ್ತಿರಲಿಲ್ಲ. ಅದು ದತ್ತ ಹೋರಾಟಕ್ಕೆ ಮಾತ್ರ ಸೀಮಿತವಾಗಿತ್ತು ನನ್ನ ಕೇಸುಗಳಿಗೂ ಅದನ್ನು ಬಳಸುತ್ತಿರಲಿಲ್ಲ. “ಈ ಮಧ್ಯೆ ದತ್ತ ಪಾದುಕೆ ಮಾಡಿಕೊಟ್ಟಿದ್ದ ಕಾರ್ಪೆಂಟರ್ ಮೂರ್ತಿಯವರು ನಮ್ಮನ್ನು ಸಂಪರ್ಕಿಸಿ ಪಾದುಕೆ ಮಾಡಿರುವುದರ ಹಣ ಕೊಡುವಂತೆ ಕೇಳಿಕೊಂಡರು. ನಮ್ಮ ಹುಡುಗರು ಮೂರ್ತಿಗೆ ಸರಿಯಾಗಿ ಹೊಡೆದು ಕಳಿಸಿದರು. ಇವತ್ತು ಇಡೀ ಸರ್ಕಾರ ಆ ದತ್ತ ಪಾದುಕೆಗೆ ಕೈ ಮುಗಿಯುತ್ತಿದೆ. ಇಡೀ ಹಿಂದು ಸಮುದಾಯ ಅದೇ ದತ್ತ ಪಾದುಕೆಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತದೆ. ಆ ದತ್ತ ಪಾದುಕೆಯಿಂದಲೇ ಹಲವರು ಶಾಸಕರಾದರು, ಮಂತ್ರಿಗಳಾದರು ಆ ದತ್ತಪಾದುಕೆಯನ್ನು ಕಾಯಲು ಐಎಎಸ್ ಮಾಡಿರುವ ಜಿಲ್ಲಾಧಿಕಾರಿಗೆ ಉಸ್ತುವಾರಿ ನೀಡಲಾಗಿದೆ. (ಮಾಹಿತಿ : ಮಹೇಂದ್ರ ಕುಮಾರ್ ದೃಡೀಕರಣ : ಮನಸೋಳಿ ಮೋಹನ್ ಮತ್ತು ಭೋಜರಾಜ್)

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2023
: Paperback
: 1/8 Demy Size
: 204
: 1142394
: .150

Books from ಮಹೇಂದ್ರ ಕುಮಾರ್ , Mahendra Kumar

Author-Image
ಮಹೇಂದ್ರ ಕುಮಾರ್ , Mahendra Kumar

Similar Books