Phone icon  CALL US NOW
080 - 22161900

  • ರೇಷ್ಮೆ ಬಟ್ಟೆ (ಕಾದಂಬರಿ) | Reshme Batte - A Novel

ರೇಷ್ಮೆ ಬಟ್ಟೆ (ಕಾದಂಬರಿ) | Reshme Batte - A Novel
10%

MRP - ₹450.00 ₹405.00

ಕುಶಾನ ಸಾಮ್ರಾಜ್ಯದ ಕಾನಿಷ್ಕನು ವಾಯವ್ಯ ಭಾರತವನ್ನು ಆಳುತ್ತಿರುವ ಹೊತ್ತಿನಲ್ಲಿ, ಚೀನಾ ದೇಶದಿಂದ ರೋಮ್ ದೇಶದ ತನಕ ಕಾಲ್ನಡಿಗೆಯ ವ್ಯಾಪಾರದ ಹಲವು ದಾರಿಗಳು ಉದ್ಭವಿಸಿದವು. ಈ ಕಾಲದಲ್ಲಿ ವಾಹನವನ್ನು ಬಳಸಿಯೂ ಆ ದಾರಿಯನ್ನು ಸಂಪೂರ್ಣವಾಗಿ ಕ್ರಮಿಸಲು ಅಸಾಧ್ಯವಾಗಿದ್ದರೂ, ಹದಿನೆಂಟು ನೂರು ವರ್ಷಗಳ ಹಿಂದೆ ಭೂಪಟದ ಅರಿವಿಲ್ಲದ ನಮ್ಮ ಹಿರಿಯರು ವ್ಯಾಪಾರದ ದೆಸೆಯಿಂದ ಈ ಕ್ಲಿಷ್ಟ ದಾರಿಯುದ್ದಕ್ಕೂ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಸಾವಿರಾರು ಮೈಲುಗಳ ಈ ದಾರಿಯು ಹಲವು ಪರ್ವತ, ಮರುಭೂಮಿ, ನದಿ, ಕೊಳ್ಳ ಕಾಡು, ನಾಡುಗಳನ್ನು ಹಾದು ಹೋಗುತ್ತಿತ್ತು. ಈ ಕಾಲದ ಭೂಪಟದ ದೇಶಗಳಾದ ಚೀನಾ, ಕಝಕಿಸ್ತಾನ್, ಉಜೈಕಿಸ್ತಾನ್, ಅಫಘನಿಸ್ತಾನ್, ಭಾರತ, ಪಾಕಿಸ್ತಾನ್, ಇರಾನ್, ಇರಾಕ್, ಟರ್ಕಿ - ಹೀಗೆ ಹಲವು ದೇಶಗಳನ್ನು ಹಾದು ಹೋಗುವ ಈ ದಾರಿಯು ವ್ಯಾಪಾರದ ಉದ್ದೇಶಕ್ಕಾಗಿ ಸಂಭವಿಸಿದರೂ ಅದಕ್ಕಾಗಿಯೇ ಸೀಮಿತವಾಗಿ ಉಳಿಯಲಿಲ್ಲ. ಧರ್ಮಗಳು, ಭಾಷೆಗಳು, ಲಿಪಿಗಳು, ಕೌಶಲ್ಯಗಳು, ಕಲಾಪ್ರಕಾರಗಳು, ತಂತ್ರಜ್ಞಾನಗಳು ಹೀಗೆ ಹಲವು ವಿದ್ಯಮಾನಗಳು ಈ ದಾರಿಯ ಮೂಲಕ ಅತ್ತಿತ್ತ ಚಲಿಸಿದವು. ಆ ಕಾಲದ ಜನರು ಅವೆಲ್ಲವನ್ನೂ ತಮ್ಮ ಅವಶ್ಯಕತೆಗೆ ತಕ್ಕಂತೆ ಅಳವಡಿಸಿಕೊಂಡು ಹೊಸ ಜಗತ್ತನ್ನು ಸೃಷ್ಟಿಸಿಕೊಳ್ಳುವುದರಲ್ಲಿ ಸಫಲರಾದರು. ಈ ಕಾದಂಬರಿಯು ಎರಡನೆಯ ಶತಮಾನದ ಏಷ್ಯಾಖಂಡದ ಹಲವು ಚಾರಿತ್ರಿಕ ಸಂಗತಿಗಳನ್ನು ಇಟ್ಟುಕೊಂಡು, ಅಂದಿನ ಯುಗಸಂಘರ್ಷವು ಜನಸಾಮಾನ್ಯರಲ್ಲಿ ತಂದಿರಬಹುದಾದ ಸವಾಲುಗಳನ್ನು ಕಾಲ್ಪನಿಕವಾದ ಕತೆಯ ಮೂಲಕ ನಿಮ್ಮ ಮುಂದಿಡಲು ಪ್ರಯತ್ನಿಸುತ್ತದೆ. ಹಲವು ದೇಶಗಳ ಮತ್ತು ಹಲವು ಧರ್ಮಗಳ ವಿಸ್ತಾರವಾದ ಅಧ್ಯಯನ ಮಾಡಿ ಈ ಕೃತಿಯನ್ನು ಲೇಖಕರು ರಚಿಸಿದ್ದಾರೆ. - (ಬೆನ್ನುಡಿಯಿಂದ)

Dispatched within 2 - 3 Business Days

 FREE Home Delivery (For purchase of Rs 499/- and above)

Product Specifications

: 1
: 2024
: Paperback
: 1/8 Demy Size
: 472
: B-1151621
: 500 Gms

ಕುಶಾನ ಸಾಮ್ರಾಜ್ಯದ ಕಾನಿಷ್ಕನು ವಾಯವ್ಯ ಭಾರತವನ್ನು ಆಳುತ್ತಿರುವ ಹೊತ್ತಿನಲ್ಲಿ, ಚೀನಾ ದೇಶದಿಂದ ರೋಮ್ ದೇಶದ ತನಕ ಕಾಲ್ನಡಿಗೆಯ ವ್ಯಾಪಾರದ ಹಲವು ದಾರಿಗಳು ಉದ್ಭವಿಸಿದವು. ಈ ಕಾಲದಲ್ಲಿ ವಾಹನವನ್ನು ಬಳಸಿಯೂ ಆ ದಾರಿಯನ್ನು ಸಂಪೂರ್ಣವಾಗಿ ಕ್ರಮಿಸಲು ಅಸಾಧ್ಯವಾಗಿದ್ದರೂ, ಹದಿನೆಂಟು ನೂರು ವರ್ಷಗಳ ಹಿಂದೆ ಭೂಪಟದ ಅರಿವಿಲ್ಲದ ನಮ್ಮ ಹಿರಿಯರು ವ್ಯಾಪಾರದ ದೆಸೆಯಿಂದ ಈ ಕ್ಲಿಷ್ಟ ದಾರಿಯುದ್ದಕ್ಕೂ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಸಾವಿರಾರು ಮೈಲುಗಳ ಈ ದಾರಿಯು ಹಲವು ಪರ್ವತ, ಮರುಭೂಮಿ, ನದಿ, ಕೊಳ್ಳ ಕಾಡು, ನಾಡುಗಳನ್ನು ಹಾದು ಹೋಗುತ್ತಿತ್ತು. ಈ ಕಾಲದ ಭೂಪಟದ ದೇಶಗಳಾದ ಚೀನಾ, ಕಝಕಿಸ್ತಾನ್, ಉಜೈಕಿಸ್ತಾನ್, ಅಫಘನಿಸ್ತಾನ್, ಭಾರತ, ಪಾಕಿಸ್ತಾನ್, ಇರಾನ್, ಇರಾಕ್, ಟರ್ಕಿ - ಹೀಗೆ ಹಲವು ದೇಶಗಳನ್ನು ಹಾದು ಹೋಗುವ ಈ ದಾರಿಯು ವ್ಯಾಪಾರದ ಉದ್ದೇಶಕ್ಕಾಗಿ ಸಂಭವಿಸಿದರೂ ಅದಕ್ಕಾಗಿಯೇ ಸೀಮಿತವಾಗಿ ಉಳಿಯಲಿಲ್ಲ. ಧರ್ಮಗಳು, ಭಾಷೆಗಳು, ಲಿಪಿಗಳು, ಕೌಶಲ್ಯಗಳು, ಕಲಾಪ್ರಕಾರಗಳು, ತಂತ್ರಜ್ಞಾನಗಳು ಹೀಗೆ ಹಲವು ವಿದ್ಯಮಾನಗಳು ಈ ದಾರಿಯ ಮೂಲಕ ಅತ್ತಿತ್ತ ಚಲಿಸಿದವು. ಆ ಕಾಲದ ಜನರು ಅವೆಲ್ಲವನ್ನೂ ತಮ್ಮ ಅವಶ್ಯಕತೆಗೆ ತಕ್ಕಂತೆ ಅಳವಡಿಸಿಕೊಂಡು ಹೊಸ ಜಗತ್ತನ್ನು ಸೃಷ್ಟಿಸಿಕೊಳ್ಳುವುದರಲ್ಲಿ ಸಫಲರಾದರು. ಈ ಕಾದಂಬರಿಯು ಎರಡನೆಯ ಶತಮಾನದ ಏಷ್ಯಾಖಂಡದ ಹಲವು ಚಾರಿತ್ರಿಕ ಸಂಗತಿಗಳನ್ನು ಇಟ್ಟುಕೊಂಡು, ಅಂದಿನ ಯುಗಸಂಘರ್ಷವು ಜನಸಾಮಾನ್ಯರಲ್ಲಿ ತಂದಿರಬಹುದಾದ ಸವಾಲುಗಳನ್ನು ಕಾಲ್ಪನಿಕವಾದ ಕತೆಯ ಮೂಲಕ ನಿಮ್ಮ ಮುಂದಿಡಲು ಪ್ರಯತ್ನಿಸುತ್ತದೆ. ಹಲವು ದೇಶಗಳ ಮತ್ತು ಹಲವು ಧರ್ಮಗಳ ವಿಸ್ತಾರವಾದ ಅಧ್ಯಯನ ಮಾಡಿ ಈ ಕೃತಿಯನ್ನು ಲೇಖಕರು ರಚಿಸಿದ್ದಾರೆ. - (ಬೆನ್ನುಡಿಯಿಂದ)

ವಸುಧೇಂದ್ರ ಕನ್ನಡ ಬರಹಗಾರರು ಹಾಗೂ ಪುಸ್ತಕ ಪ್ರಕಾಶಕರು.[೧] [೨] ಮುಖ್ಯವಾಗಿ ಕತೆ, ಕಾದಂಬರಿ, ಲಲಿತ ಪ್ರಬಂಧಗಳು ಇವರ ಬರವಣಿಗೆಯ ಪ್ರಕಾರಗಳು. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ೧೯೬೯ರಲ್ಲಿ ಜನಿಸಿದ ವಸುಧೇಂದ್ರ ಅಲ್ಲಿಯೇ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಡಿದ್ದಾರೆ.ಸುರತ್ಕಲ್ ನಿಂದ ಇಂಜಿನಿಯರಿಂಗ್ ಪದವಿ ಮತ್ತು ಇಂಡಿಯನ್ ಇನ್ಸಸ್ಟಿಟ್ಯೂಟ್ ಆಫ್ ಸೈನ್ಸ್ ನಿಂದ ಎಂ.ಇ. ಪದವಿ ಪಡೆದಿದ್ದಾರೆ. ೨೦ ವರ್ಷಗಳ ಕಾಲ ಸಾಫ್ಟ್ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಬೆಂಗಳೂರುಲ್ಲಿ ವಾಸವಾಗಿದ್ದು ಸದ್ಯಕ್ಕೆ ಖಾಸಗಿಯಾಗಿ ಹಲವಾರು ಕೆಲಸ ಮತ್ತು ಬರಹಗಳಲ್ಲಿ ತೊಡಗಿಕೊಂಡಿದ್ದಾರೆ. ಛಂದ ಪುಸ್ತಕ ಎಂಬ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ ನಾಡಿನ ಹಲವಾರು ಹೊಸ ಬರಹಗಾರರನ್ನು ಗುರುತಿಸಿದ್ದಾರೆ. ಚಾರಣದಲ್ಲಿ ಆಸಕ್ತಿಯಿರುವ ಇವರು ನಮ್ಮ ಪಶ್ಚಿಮ ಘಟ್ಟದ ಕಾಡಿನಲ್ಲಿರುವ ಹಲವು ಬೆಟ್ಟಗಳನ್ನೂ ಮತ್ತು ತಾಂಜಾನಿಯಾ ದೇಶದಲ್ಲಿರುವ ಕಿಲಿಮಂಜಾರೋ ಪರ್ವತವನ್ನು ಹತ್ತಿದ್ದಾರೆ. ಪ್ರತಿ ನಿತ್ಯ ಸ್ಕ್ವಾಷ್ ಆಡುತ್ತಾರೆ. ಪ್ರಪಂಚದ ಒಳ್ಳೆಯ ಚಿತ್ರಗಳನ್ನು ಅತ್ಯಂತ ಪ್ರೀತಿಯಿಂದ ನೋಡುತ್ತಾರೆ. ಕರ್ನಾಟಕ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕೇಳುತ್ತಾರೆ. ವಸುಧೇಂದ್ರರು ಲೈಂಗಿಕ ಅಲ್ಪಸಂಖ್ಯಾತರ(ಎಲ್.ಜಿ.ಬಿ.ಟಿ.) ಸ್ಥಳೀಯ ಸಂಸ್ಥೆಯಾದ Good As You ದೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅವರು ಕರ್ನಾಟಕದಲ್ಲಿ ಸಲಿಂಗಕಾಮಿ ಹಕ್ಕುಗಳಿಗಾಗಿ ಸಾಕಷ್ಟು ಕಾರ್ಯಗಳನ್ನು ಮಾಡುತ್ತಿದ್ದಾರೆ. ಕನ್ನಡ ದಿನಪತ್ರಿಕೆ ವಿಶ್ವವಾಣಿಯ ಸಂದರ್ಶನದಲ್ಲಿ, ಹೆಚ್ಚಿನ ಜನರು ಸಂತಾನೋತ್ಪತ್ತಿಗಷ್ಟೇ ಅಲ್ಲದೇ ವಿನೋದಕ್ಕಾಗಿ ಸಹ ಲೈಂಗಿಕಕ್ರಿಯೆಯನ್ನು ಬಳಸಿಕೊಳ್ಳುತ್ತಾರೆ. ಅಲ್ಲದೇ, ಸಲಿಂಗಕಾಮಿಗಳ ವಿರುದ್ಧ ದಬ್ಬಾಳಿಕೆಯನ್ನು, ದಲಿತರ ವಿರುದ್ಧದ ದಬ್ಬಾಳಿಕೆಗೆ ಹೋಲಿಸಬಹುದು ಎಂದು ಅಭಿಪ್ರಾಯ ಪಡುತ್ತಾರೆ. "ಮೋಹನಸ್ವಾಮಿ", ತಮ್ಮದೇ ಕಥೆ ಎಂದು ಗೊತ್ತಾದರೆ ಜನ ಹೇಗೆ ಸ್ವೀಕರಿಸಿಯಾರು ಎಂಬ ಭಯವಿದ್ದರಿಂದ, ಮೊದಲು ಬೇರೆ ಹೆಸರಿನಲ್ಲಿ ಪ್ರಕಟಿಸಲು ತೀರ್ಮಾನಿಸಿದ್ದರು. ಕೊನೆಯಲ್ಲಿ ತಮ್ಮದೇ ಹೆಸರಿನಲ್ಲಿ ಪ್ರಕಟಿಸುವ ಮೂಲಕ ತಾವು ಒಬ್ಬ ಸಲಿಂಗಿ ಎನ್ನುವ ಸತ್ಯವನ್ನು ಪ್ರಪಂಚದೊಂದಿಗೆ ಹಂಚಿಕೊಂಡರು. [೯]. ಪ್ರಜಾವಾಣಿಯ ಸಂದರ್ಶನದಲ್ಲಿ "ಹದಿನೆಂಟು ವರ್ಷಕ್ಕೆ ಆಗಬೇಕಿದ್ದ ವಿಮೋಚನೆ ನಲವತ್ತೈದನೇ ವಯಸ್ಸಿಗೆ ಆಯ್ತು. ನನ್ನಂತೆ ಇನ್ನೊಂದು ಮಗು ಕಷ್ಟ ಪಡಬಾರದು. ಕೆಲವು ಮಕ್ಕಳು ತಮ್ಮ ಸಂಕಟಗಳನ್ನು ಯಾರೊಂದಿಗೂ ಹೇಳಿಕೊಳ್ಳಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹಾಗಾಗಬಾರದು" ಎಂದು ತಮ್ಮ ಮನದಾಳದ ಮಾತನ್ನು ಹೇಳಿಕೊಂಡಿದ್ದರು

Books from ವಸುಧೇಂದ್ರ, Vasudhendra

Author-Image
ವಸುಧೇಂದ್ರ, Vasudhendra

About Author

Similar Books