ಋತು ಸಂಕ್ರಮಣ ಮತ್ತು ಇತರ ಕಥೆಗಳು | Rutu Sankramana Mattu Itara Kathegalu
MRP - ₹140.00 ₹126.00
ಈ ಸಂಕಲನದ ಕಥೆಗಳು ಸ್ತ್ರೀಪಾತ್ರ ಕೇಂದ್ರಿತವಾಗಿವೆ. ಈ ಕಥೆಗಳಲ್ಲಿ ಎಲ್ಲ ವಯೋಮಾನದ, ಎಲ್ಲ ವರ್ಗಗಳ ಮಹಿಳೆಯರಿದ್ದಾರೆ. ಈ ಮಹಿಳೆಯರ ಮಾನಸಿಕ ತುಮುಲಗಳನ್ನು, ದೈಹಿಕ ನೋವನ್ನು ಅನಾವರಣಗೊಳಿಸಿ ಅದಕ್ಕೆ ಕಾರಣವಾದಂತಹ ಸಾಮಾಜಿಕ ಮತ್ತು ಕೌಟುಂಬಿಕ ಪರಿಸ್ಥಿತಿಗಳನ್ನು ಲೇಖಕ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಲೇಖಕ ಗೋಕುಲದಾಸ ಪ್ರಭು ಕೇರಳದ ಕೊಚ್ಚಿಯವರು. ಇಂಗ್ಲಿಷ್ ಸ್ನಾತಕ ಪದವಿ ಪಡೆದಿದ್ದು ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತರು. පඨව ಭಾರತ ಕೊಂಕಣಿ ಪರಿಷತ್ತಿನ ಕಾರ್ಯಾಧ್ಯಕ್ಷರಾಗಿದ್ದವರು. "ಪೃಥಿವೈ ನಮಃ" ಕಿರು ಕಾದಂಬರಿ ಹಾಗೂ ಇನ್ನೂ ಹಲವು ಕಥಾಸಂಕಲನಗಳನ್ನು ಮಲಯಾಳಂನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರಿಗೆ ಹಲವು ಬಹುಮಾನ ಮತ್ತು ಪ್ರಶಸ್ತಿಗಳು ಲಭಿಸಿವೆ. ಇವರು ಕೆಲವು ಕಾಲದಿಂದ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಟ್ರಸ್ಟಿಯೂ ಆಗಿದ್ದಾರೆ. ಈ ಕೃತಿಯ ಅನುವಾದಕರು ಡಾ. ಗೀತಾ ಶೆಣೈ. ಇವರು ಇಂಗ್ಲಿಷ್ ಮತ್ತು ಕೊಂಕಣಿಯಿಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ಕೊಂಕಣಿಗೆ ಕೃತಿಗಳನ್ನು ಅನುವಾದಿಸಿದ್ದಾರೆ. ಕನ್ನಡ ವಚನ ಸಾಹಿತ್ಯ ಮತ್ತು ಕನಕದಾಸ ಸಮಗ್ರ ಸಾಹಿತ್ಯದ ಬಹುಭಾಷಾ ಅನುವಾದ ಯೋಜನೆಯಲ್ಲಿ ಕೊಂಕಣಿ ಸಂಪುಟದ ಸಂಪಾದಕರಾಗಿ, ಅನುವಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ಕೊಂಕಣಿಗೆ ಅನುವಾದಿಸಿದ ಕುವೆಂಪು ವೈಚಾರಿಕ ಲೇಖನಗಳ ಸಂಗ್ರಹ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಬಹುಮಾನ ದೊರೆತಿದೆ. ನವಕರ್ನಾಟಕ ಪ್ರಕಟಿಸಿರುವ ಇವರ ಧರ್ಮಾನಂದ ಕೊಸಾಂಬಿಯವರ 'ನಿವೇದನೆ' ಕೃತಿಗೆ ನೀಳಾದೇವಿ ದತ್ತಿ ಬಹುಮಾನ ಮತ್ತು 'ಕಾಳಿಗಂಗಾ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅನುವಾದ ಗ್ರಂಥ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಕಟಿಸಿದ 'ಅಂತರ ಆಯಾಮಿ' ಕೃತಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅನುವಾದ ಪ್ರಶಸ್ತಿ ಮತ್ತು 'ಕನಸಿನ ಹೂಗಳು' ಕೃತಿಗೆ ಜಿ. ವಿ. ನಿರ್ಮಲಾ ದತ್ತಿ ಬಹುಮಾನ ದೊರೆತಿದೆ. ಇವರು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ ಪುರಸ್ಕೃತರು.
Dispatched within 2 - 3 Business Days
FREE Home Delivery
(For purchase of Rs 499/- and above)
Product Specifications

Books from ಗೋಕುಲದಾಸ ಪ್ರಭು , Gokuldas Prabhu