ಸಾವಿತ್ರಿಬಾಯಿ ಪುಲೆಯವರ ಜೀವನ ಮತ್ತು ಸಾಧನೆಯೇ ಈ ಚಿತ್ರರೂಪಕವಾಗಿದೆ. ಇವರ ಜೀವನ ಸಮಾಜಸೇವೆಗೆ ಮುಡಿಪು. ದಬ್ಬಾಳಿಕೆಯ ಸಾಮಾಜಿಕ ಕಟ್ಟುಪಾಡುಗಳ ಸವಾಲುಗಳನ್ನು ಶಿಕ್ಷಣ, ಸಮಾನತೆ ಮತ್ತು ನ್ಯಾಯದ ಅನ್ವೇಷಣೆ ನಡೆಸುವ ಮೂಲಕ ಅಸಾಧಾರಣ ಧೈರ್ಯದಿಂದ ಕಾರ್ಯನಿರ್ವಹಿಸಿದ್ದಾರೆ. “ವ್ಯಕ್ತಿ ಮತ್ತು ಚಿಂತನೆಗಳು’’ ಎಂಬ ಶೀರ್ಷಿಕೆಯ ಅಜೀಂ ಪ್ರೇಮ್ ಜಿ ಯೂನಿವರ್ಸಿಟಿಯ ಈ ಹೆಜ್ಜೆ ನಮ್ಮ ಜ್ಞಾನವನ್ನು ವಿಸ್ತರಿಸುತ್ತಲೇ ಇರುವ ಸಮಾಜ ಸುಧಾರಕರು, ಕಲಾವಿದರು, ವಿಜ್ಞಾನಿಗಳು, ತತ್ವಜ್ಞಾನಿಗಳು ಮತ್ತು ಶಿಕ್ಷಣತಜ್ಞರ ಕ್ರಿಯೆ, ಬದುಕು ಮತ್ತು ಚಿಂತನೆಗಳನ್ನು ಪರಿಶೋಧಿಸುವ ಪ್ರಯತ್ನವಾಗಿದೆ. https://navakarnataka.com/savitribai-pravartakiya-payana

