
‘ಗಿಲ್ಗಮೆಶ್ ಮಹಾಗಾಥೆ’ ಕನ್ನಡಕ್ಕೆ: ಡಾ. ಜೆ. ಬಾಲಕೃಷ್ಣ ಗಿಲ್ಗಮೆಶ್ ಮಹಾಗಾಥೆ ಬೈಬಲ್, ಈಲಿಯಡ್ ಹಾಗೂ ಒಡಿಸ್ಸಿಗಳಿಗಿಂತ ಹಳೆಯದು. ಈ ಮಹಾಕಾವ್ಯದ ಅಂತರಾಳ ಸಾವಿನ ಹೆದರಿಕೆ. ಹೇಗಾದರೂ ಸಾವನ್ನು ಗೆದ್ದು ಅಮರತ್ವ ಸಾಧಿಸಬೇಕು ಎಂದು ಹೊರಡುವ ಉರುಕ್ (ಇಂದಿನ ಇರಾಕ್) ದೇಶದ ರಾಜ ಗಿಲ್ಗಮೆಶ್‌ನ ಸೆಣಸಾಟದ ಕತೆ. ಹುಟ್ಟು ಸಾವುಗಳ ನಡುವಿನ ಬದುಕಿನ ಪ್ರತಿಕ್ಷಣವನ್ನೂ ಸಹಬಾಳ್ವೆಯಿಂದ, ಪ್ರೀತಿ, ಪ್ರೇಮದಿಂದ ಬದುಕುವುದೇ ಸಾರ್ಥಕ ಜೀವನ ಎನ್ನುವುದನ್ನು ಈ ಕೃತಿ ಮನದಟ್ಟು ಮಾಡುತ್ತದೆ. ವಿಶಿಷ್ಟ ಕೃತಿಕಾರ ಡಾ. ಜೆ. ಬಾಲಕೃಷ್ಣ ಲೇಖಕ, ಅನುವಾದಕ ಹಾಗೂ ವ್ಯಂಗ್ಯಚಿತ್ರಕಾರರಾದ ಡಾ. ಜೆ. ಬಾಲಕೃಷ್ಣ ಅವರು ಬ್ಯಾಂಕ್ ಅಧಿಕಾರಿಯಾಗಿ ನಂತರ ಬೆಂಗಳೂರು ಕೃಷಿ ವಿ.ವಿ.ಯ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ/ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಕನಸೆಂಬ ಮಾಯಾಲೋಕ, ಮಿಥುನ, ಮಾತಾಹರಿ, ಕೃಷಿ ವಿಜ್ಞಾನ ಸಾಹಿತ್ಯ ನಡೆದು ಬಂದ ಹಾದಿ, ಮಳೆಬಿಲ್ಲ ನೆರಳು (ವೈಜ್ಞಾನಿಕ ಲೇಖನಗಳು) ಮೌನ ವಸಂತ (ಮಹಿಳಾ ಕಥನಗಳು). ನೆನಪುಗಳಿಗೇಕೆ ಸಾವಿಲ್ಲ (ಕಥಾ ಸಂಕಲನ), ನಡೆದಷ್ಟೂ ದೂರ (ಪ್ರವಾಸ ಕಥನ) ಹಾಗೂ ವ್ಯಂಗ್ಯಚಿತ್ರ ಚರಿತ್ರೆ – ಪ್ರಕಟಿತ ಕೃತಿಗಳು. ಇವರ ‘ಮಳೆಬಿಲ್ಲ ನೆರಳು’ ಕೃತಿಗೆ ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿಯ ಅತ್ಯುತ್ತಮ ಕೃತಿ ಪ್ರಶಸ್ತಿ ಲಭಿಸಿದೆ. ಇವರು ೨೦೨೩ರ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು.https://navakarnataka.com/gilgamesh-mahaagaathe

